ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಯಾದವ ಸೇನೆ ರಾಜ್ಯಾಧ್ಯಕ್ಷ ಪ್ರಕಾಶ್ ಯಾದವ್ ಮೇಲೆ ಹಲ್ಲೆ

Vishwanath S
Updated On : 30 Jun 2013, 12:12 pm

ತಿಪಟೂರು:  ಯಾದವ ಸೇನೆ ರಾಜ್ಯಾಧ್ಯಕ್ಷ ಪ್ರಕಾಶ್ ಯಾದವ್ ಮೇಲೆ ಈರಣ್ಣ ಎಂಬಾತ ತೀವ್ರ ಹಲ್ಲೆ ನಡೆಸಿದ್ದು, ಪ್ರಕಾಶ್ ಯಾದವ್ ತಲೆ ಹಿಂಭಾಗಕ್ಕೆ ಪೆಟ್ಟುಬಿದ್ದು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕಾಶ್ ಯಾದವ್ ತಾಲೂಕಿನ ಸಾರ್ಥವಳ್ಳಿ ಯಾದವರ ಹಟ್ಟಿಯವರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿ.ನಾ.ಹಳ್ಳಿ ತಾಲೂಕಿನಿಂದ ವಿಧಾನಸಭಾ ಅಭ್ಯರ್ಥಿಯಾಗಿ ಸಂಯುಕ್ತ ಜನತಾದಳದಿಂದ ಸ್ಪರ್ಧಿಸಿದ್ದರು.
ಚುನಾವಣಾ ಪ್ರಚಾರ ಸಂದರ್ಭ ವೇಳೆಯಲ್ಲಿ ದಸೂಡಿ ಎಳೆಗೊಲ್ಲರಹಟ್ಟಿಯ ಈರಣ್ಣ ಎಂಬಾತ ಚಿಕ್ಕ ವಿಷಯಕ್ಕೆ ಪ್ರಕಾಶ್ ವಿರುದ್ಧ ಮಾತಿಗೆ ಮಾತು ಬೆಳೆಸಿದ್ದರೆಂದು ಹೇಳಲಾಗಿದೆ.
ಇದೇ ಈರಣ್ಣ ಶನಿವಾರ ಪ್ರಕಾಶ್ ಯಾದವ್ ಗ್ರಾಮದ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದು, ಪ್ರಕಾಶ್ ಯಾದವ್ ತಮ್ಮ ಜಮೀನು ನೋಡಲು ಬೆಳಗ್ಗೆ 11 ಗಂಟೆ ವೇಳೆಯಲ್ಲಿ ಒಬ್ಬರೇ ಹೋಗಿದ್ದರು. ಈ ಸಂದರ್ಭ ಉಪಯೋಗಿಸಿಕೊಂಡ ಈರಣ್ಣ ಮತ್ತೆ ಜಗಳ ತೆಗೆದು ಅಂತಿಮವಾಗಿ ಕಲ್ಲಿನಿಂದ ಪ್ರಕಾಶ್ ಯಾದವ್ ತಲೆ ಹಿಂಭಾಗಕ್ಕೆ ಹೊಡೆದರು. ಈ ಹೊಡೆತಕ್ಕೆ ಪ್ರಕಾಶ್ ತಲೆಗೆ ಗಾಯವಾಗಿ ರಕ್ತ ಚಿಮ್ಮಿದೆ. ಪ್ರಕಾಶ್ ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯ ಯಾದವ ಸೇನೆ ಪದಾಧಿಕಾರಿಗಳು ಈರಣ್ಣನನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣ ಹೊನ್ನವಳ್ಳಿ ಠಾಣೆಯಲ್ಲಿ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement