50 ಲಕ್ಷ ಪಂಗನಾಮ
ಹಾಸನ: ಕೇರಳ ಮೂಲದ ದಂಪತಿ ಅಮಾಯಕ ಮಹಿಳೆಯರನ್ನು ನಂಬಿಸಿ 50 ಲಕ್ಷ ದೋಚಿಕೊಂಡು ಪರಾರಿಯಾಗಿರುವ ಘಟನೆ ನಗರದಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ.
ಜಯನಗರ-ದಾಸರಕೊಪ್ಪಲು ವ್ಯಾಪ್ತಿಯಲ್ಲಿ ಪ್ರದೀಪ್ ಮತ್ತು ಸುಮಿತ್ರಾ ಎಂಬವರೇ ವಂಚಿಸಿದ ದಂಪತಿ. ಅವರು ಕೆಲ ವರ್ಷಗಳ ಹಿಂದೆ ಹಾಸನಕ್ಕೆ ಬಂದು ಜಯನಗರದಲ್ಲಿ ವಾಸವಾಗಿದ್ದರು.
ದಂಪತಿ ತರಕಾರಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ನಂತರ ಸಣ್ಣದಾಗಿ ಹೊಟೇಲ್ ನಡೆಸಲು ಆರಂಭಿಸಿದರು. ಈ ಹೊಸ ವ್ಯವಹಾರ ಆರಂಭಿಸಲು ಗೀತಾ, ಮೀನಾಕ್ಷಿ, ಶಿಲ್ಪ ಎಂಬ ಮಹಿಳೆಯರು ಸೇರಿದಂತೆ ಇತರೆ ಮಹಿಳಾ ಸಂಘಟನೆಗಳಿಂದ ಸಾಲ ಕೊಡಿ, ಬಡ್ಡಿ ಸಮೇತ ವಾಪಸ್ ನೀಡುವುದಾಗಿ ನಂಬಿಸಿ 10 ರಿಂದ 1 ಲಕ್ಷದವರೆಗೂ ಹಣ ಪಡೆದಿದ್ದರು. ಸುಮಾರು 50 ಲಕ್ಷದಷ್ಟು ಹಣ ಸಂಗ್ರಹಿಸಿ ರಾತ್ರೋರಾತ್ರಿ ಈ ದಂಪತಿ ಪರಾರಿಯಾಗಿದ್ದಾರೆ.
ಮನೆಯವರು ನೀಡಿದಂಥ ಅಷ್ಟೋ ಇಷ್ಟೋ ಉಳಿಸಿದ ಹಣವನ್ನು ಮಹಿಳೆಯರು ಈ ಚೋರ ದಂಪತಿಗೆ ನೀಡಿ ಕೈಸುಟ್ಟುಕೊಂಡಿದ್ದಾರೆ. ತನಗೆ ತಮ್ಮ ಹಣವನ್ನು ಪಾವಸ್ ಕೊಡಿಸುವಂತೆ ಮಹಿಳೆಯರು ಪೊಲೀಸರರ ಮೊರೆ ಹೋಗಲು ನಿರ್ಧರಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.