'ಆಕಾರದಲ್ಲಿ ಕಿರಿದು, ಕಾವ್ಯ ಶಕ್ತಿಯಲ್ಲಿ ಹಿರಿದಾದುದೇ ಚುಟುಕು'
ತುಮಕೂರು: ಹತ್ತು ಹಲವು ಪ್ರಾಕಾರಗಳಿಂದ ಸಮೃದ್ಧಿಯಾಗಿರುವ ಕನ್ನಡ ಸಾಹಿತ್ಯ ಲೋಕದಲ್ಲಿ ಚುಟುಕು ಸಾಹಿತ್ಯಕ್ಕೆ ತುಂಬಾ ಮನ್ನಣೆಯಿದೆ ಎಂದು ತುಮಕೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ಕೊಡ್ಲಿಯವರ್ ಪ್ರತಿಪಾದಿಸಿದರು.
ಅವರು ತುಮಕೂರು ಸಮೀಪದ ಕ್ಯಾತ್ಸಂದ್ರದಲ್ಲಿರುವ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಏರ್ಪಾಟಾಗಿದ್ದ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುಟುಕು ಸಾಹಿತ್ಯದಿಂದ ಎಲ್ಲರ ಮನೋಲ್ಲಾಸ ಸಾಧ್ಯ. ಚುಟುಕು ಸಾಹಿತ್ಯ ಆಕಾರದಲ್ಲಿ ಕಿರಿದಾಗಿದ್ದರೂ ಕಾವ್ಯಶಕ್ತಿ ಅಭಿವ್ಯಕ್ತಿಸುವಲ್ಲಿ ತುಂಬಾ ಪ್ರಭಾವಶಾಲಿ. ಎಲ್ಲ ಕಾಲಧರ್ಮಗಳ ವಿಚಾರಧಾರೆಯನ್ನು ಹೃದಯಸ್ಪರ್ಶಿಯಾಗಿ ಬಿಂಬಿಸಬಲ್ಲದು. ಜಿಲ್ಲೆಯಲ್ಲಿ ಚುಟುಕು ಸಾಹಿತಿಗಳ ಸಂಖ್ಯೆ ಗಣನೀಯವಾಗಿ ಬೆಳೆದಿದೆ. ಅದು ಮತ್ತಷ್ಟು ಮೌಲಿಕವಾಗಿ ಬೆಳೆಯಬೇಕಾಗಿದೆ ಎಂದರು. ಗೋಷ್ಠಿ ಉದ್ಘಾಟಿಸಿದ ವಿದ್ಯಾವಾಚಸ್ಪತಿ ಕವಿತಾಕೃಷ್ಣ ಮಾತನಾಡಿ, ಚುಟುಕುಗಳು ಆಕಾರದಲ್ಲಿ ಕಿರಿದಾದರೂ ಅಣುರೂಪದ ಶಕ್ತಿಶಾಲಿ ಪ್ರಾಕಾರಗಳು ಎಂದು ಶ್ಲಾಘಿಸಿದರು. ಚುಟುಕು ಪ್ರಾಕಾರಕ್ಕೆ ಪ್ರಾಚೀನ ಇತಿಹಾಸವೇ ಇದೆ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.