'ಉಪನಿಷತ್ತಿನ ಸಂದೇಶ ಎಲ್ಲ ಕಾಲಗಳಲ್ಲೂ ಪ್ರಸ್ತುತ'
ತುಮಕೂರು: ಉಪನಿಷತ್ತಿನ ಸಂದೇಶ ಎಲ್ಲ ಕಾಲಗಳಲ್ಲೂ ಪ್ರಸ್ತುತವಾಗಿದೆ ಎಂದು ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಭಾರತರತ್ನ ಡಾ. ಎಂ.ಎಸ್. ಸುಬ್ಬುಲಕ್ಷ್ಮೀ ಆರ್ಟ್ ಗ್ಯಾಲರಿ, ಲಲಿತಕಲೆ, ಅನಿಮೇಶನ್ ಮತ್ತು ವಿನ್ಯಾಸ ಕೇಂದ್ರ ಆಯೋಜಿಸಿದ್ದ ಉಪನಿಷತ್ ಭಾವಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಪನಿಷತ್ ಮನುಷ್ಯನ ಬದುಕಿನೊಂದಿಗೆ ಅತ್ಯಂತ ನಿಕಟ ಸಂಬಂಧವನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟರು.
ಉಪನಿಷತ್ ಎಂದರೆ ಹತ್ತಿರದ ಮಾತು ಎಂದರ್ಥ. ಅಂದರೆ ಉಪನಿಷತ್ ಬೇರೆಲ್ಲೋ ಇಲ್ಲ, ಅದು ನಮ್ಮ ಸುತ್ತಮುತ್ತ, ನಮ್ಮ ಆಂತರ್ಯದಲ್ಲೇ ಇದೆ. ಉಪನಿಷತ್‌ನಲ್ಲಿರುವುದು ಮನುಷ್ಯನಿಗೆ ತುಂಬ ಹತ್ತಿರವಾದ ಮಾತು. ಮನುಷ್ಯ ತನ್ನ ಒಳದನಿಯನ್ನು ಕೇಳಿಸಿಕೊಳ್ಳುವ ಸಂವೇದನಾಶೀಲತೆಯನ್ನು ಕಳೆದುಕೊಂಡಿರುವ ಇಂದಿನ ದಿನಗಳಲ್ಲಿ ಉಪನಿಷತ್ ಹೇಳುವ ಬದುಕಿನ ಸತ್ಯಗಳು ಅತ್ಯಂತ ಪ್ರಸ್ತುತವೆನಿಸುತ್ತವೆ ಎಂದರು.
ವೇದಗಳ ಕೊನೆಯಭಾಗದಲ್ಲಿದ್ದು ವೇದಾಂತವೆಂದು ಕರೆಸಿಕೊಂಡಿರುವ ಉಪನಿಷತ್ತುಗಳು ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವ್ಯಕ್ತಿ ತನ್ನ ಬದುಕನ್ನು ಸಮರ್ಪಕವಾಗಿ ನಡೆಸಿಕೊಂಡು ಹೋದರೆ ಅದೇ ವೇದಾಂತದ ಸಾರವನ್ನು ಅರ್ಥಮಾಡಿಕೊಂಡಂತೆ ಎಂದು ತೋಳ್ಪಾಡಿ ವಿವರಿಸಿದರು. ತುಮಕೂರು ವಿಶ್ವವಿದ್ಯಾನಿಲಯದ ವತಿಯಿಂದ ಲಕ್ಷ್ಮೀಶ ತೋಳ್ಪಾಡಿಯವರನ್ನು ಸನ್ಮಾನಿಸಲಾಯಿತು. ತುಮಕೂರು ವಿ.ವಿ. ಕುಲಸಚಿವ ಎನ್. ಲಕ್ಷ್ಮೀಕಾಂತ ಅಧ್ಯಕ್ಷತೆ ವಹಿಸಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.