ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪಾವಗಡ ಶ್ರೀರಾಮ್ ಕೆಜೆಪಿ ಅಭ್ಯರ್ಥಿ

Parashurama
Updated On : 1 Mar 2013, 10:08 am

ತುಮಕೂರು: ಪಾವಗಡ ಶ್ರೀರಾಮ್ ಅವರನ್ನು ಪಾವಗಡ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಘೋಷಿಸಿರುವುದಾಗಿ ಕೆಜೆಪಿ ಮುಖಂಡ ಟಿ. ರಾಜೇಂದ್ರ ತಿಳಿಸಿದರು.
 ಬೆಂಗಳೂರಿನ ಕೆಜೆಪಿ ಕೇಂದ್ರ ಕಚೇರಿಯಲ್ಲಿ ಪಾವಗಡ ಶ್ರೀರಾಮ್ ಅವರನ್ನು, ಯಡಿಯೂರಪ್ಪ ಸಮ್ಮುಖದಲ್ಲೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ಪಾವಗಡ ಶ್ರೀರಾಮ್ ಶೋಷಿತ ವರ್ಗದ ನಾಯಕರಾಗಿ ಕಳೆದ ಒಂದು ದಶಕದಿಂದ ಹೋರಾಟ ಮಾಡಿ ನಮ್ಮ ಪಕ್ಷಕ್ಕೆ ಬಂದಿರುವುದು ಶಕ್ತಿ ತಂದಿದೆ. ಸಂತಸ ತಂದಿದೆ. ಅವರು ಕೂಡಲೇ ಪಾವಗಡಕ್ಕೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸೂಚನೆ ನೀಡಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ನ್ಯಾ. ಸದಾಶಿವ ಆಯೋಗಕ್ಕೆ 11 ಕೋಟಿ ರು. ಹಣ ಬಿಡುಗಡೆ ಮಾಡಿದ್ದೇನೆ. ಗೋವಿಂದ ಕಾರಜೋಳ, ನಾರಾಯಣಸ್ವಾಮಿ ಅವರನ್ನು ಕ್ಯಾಬಿನೆಟ್ ದರ್ಜೆ ಸಚಿವರನ್ನಾಗಿ ಮಾಡಿದ್ದೆ. ಶೋಷಿತ ಸಮುದಾಯಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ತಾವು ಹಾಗೂ ತಮ್ಮ ಪಕ್ಷ ಬದ್ಧವಾಗಿರುತ್ತದೆ ಎಂದು ಯಡಿಯೂರಪ್ಪ ಘೋಷಿಸಿದರು.
ಹೋರಾಟಗಾರ: ಕೆಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಡಿ. ಲಕ್ಷ್ಮೀನಾರಾಯಣ್ ಮಾತನಾಡಿ, ಪಾವಗಡ  ಶ್ರೀರಾಮ್, ನಮ್ಮ ಜಿಲ್ಲೆಯವರಾಗಿದ್ದು, ನಾವು 13 ವರ್ಷಗಳಿಂದ ಅವರ ಹೋರಾಟಗಳನ್ನು ಗಮನಿಸಿದ್ದೇನೆ. ರಾಜ್ಯದಲ್ಲಿ ಶೋಷಿತ ವರ್ಗಗಳ ಧ್ವನಿಯಾಗಿರುವ ಇವರು 30 ಜಿಲ್ಲೆಗಳಲ್ಲಿ ಜನಾಂಗದ ಸಂಘಟನೆ ಮಾಡಿ, ಶಕ್ತಿಯಾಗಿದ್ದಾರೆ. ಯಡಿಯೂರಪ್ಪನವರ ನಾಯಕತ್ವವನ್ನು ನಂಬಿ ಬಂದವರನ್ನು ಪಕ್ಷ ಎಂದೂ ಕೈ ಬಿಡುವುದಿಲ್ಲ ಎಂದರು.
ಬಲವರ್ಧನೆ: ಕೆಜೆಪಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮುಕುಡಪ್ಪ ಮಾತನಾಡಿ, ಕೆಜೆಪಿ ಎಲ್ಲ ವರ್ಗಗಳ ಹಿತ ಕಾಪಾಡಲು ಬದ್ಧವಾಗಿರುವ ಪ್ರಾದೇಶಿಕ ಪಕ್ಷವಾಗಿದೆ. ದಲಿತ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರು ಈ ಪಕ್ಷದಲ್ಲಿ ಹೆಚ್ಚಿನದಾಗಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದ ಅವರು, ಪಾವಗಡ ಶ್ರೀರಾಮ್ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಪಕ್ಷದ ಬಲವರ್ದನೆಗೆ ಶ್ರಮಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಮಾದಿಗ ದಂಡೋರ ರಾಜ್ಯ ಮಹಿಳಾಧ್ಯಕ್ಷೆ ಲಕ್ಷ್ಮೀದೇವಮ್ಮ, ರಾಜ್ಯ ವಕ್ತಾರ ಬಿ.ಜಿ.ಸಾಗರ್, ಬುಗಡೂರು ಸುಬ್ರಮಣಿ ಉಪ್ಪಾರ್, ತಪಗಾನಗೊಡ್ಡಿ ಟಿ.ಆರ್. ಶ್ರೀನಿವಾಸ್, ರಾಜೇಂದ್ರ, ರ್ಯಾಪ್ಟೆ ನರಸಿಂಹ, ಆಟೋ ಶಿವರಾಜ್, ಅಯ್ಯನಪಾಳ್ಯ ಕೆಂಪರಾಜ್, ಶಿವಕುಮಾರ್, ಲಕ್ಷ್ಮಮ್ಮ, ಗಂಗಮ್ಮ, ಜೆಟ್ಟಿ ನಾಗರಾಜ್ ಮುಂತಾದವರು ಕೆಜೆಪಿಗೆ ಸೇರ್ಪಡೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments