ಹೆತ್ತೇನಹಳ್ಳಿ ಜಾತ್ರಾ ಮಹೋತ್ಸವ
ತುಮಕೂರು: ತುಮಕೂರು ತಾಲೂಕು ಗೂಳೂರು ಹೋಬಳಿ ಹೆತ್ತೇನಹಳ್ಳಿ ಗ್ರಾಮದ ಪ್ರಸಕ್ತ ಸಾಲಿನ ಮಾರಮ್ಮ ದೇವರ ಜಾತ್ರೆ ಮಾ. 8 ರಿಂದ 16 ರವರೆಗೆ ನಡೆಯಲಿದ್ದು, ಜಾತ್ರಾ ರಥೋತ್ಸವವು ಮಾ.11 ರಂದು ಜರುಗಲಿದೆ ಎಂದು ತುಮಕೂರು ತಾಲೂಕು ತಹಸೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಹನ ಸಂಚಾರ ನಿರ್ಬಂಧ
ನಗರಸಭೆಯ ಮುಂಭಾಗದಲ್ಲಿರುವ ಮುಖ್ಯ ಗೇಟಿನ ಮೂಲಕ ಸಾರ್ವಜನಿಕರು ರೇಲ್ವೆ ನಿಲ್ದಾಣದಿಂದ ಬಿ.ಎಚ್. ರಸ್ತೆಗೆ ಮತ್ತು ಬಿ.ಎಚ್. ರಸ್ತೆಯಿಂದ ರೇಲ್ವೆ ನಿಲ್ದಾಣಕ್ಕೆ ಹೋಗುವ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ. ನಗರಸಭೆ ಮುಂಭಾಗದಲ್ಲಿರುವ ಗೇಟ್ ಮೂಲಕ ನಗರಸಭೆ ಕಚೇರಿ ಸಿಬ್ಬಂದಿಗಳು, ಅಧಿಕಾರಿಗಳು ಹಾಗೂ ನಗರಸಭೆಗೆ ಬರುವ ಸಾರ್ವಜನಿಕರಿಗೆ ಮಾತ್ರ ಬಳಸಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ. ಈ ಗೇಟಿನ ಮುಖಾಂತರ ಅನಧೀಕೃತವಾಗಿ ಲಘುವಾಹನಗಳು ಹಾಗೂ ದ್ವಿಚಕ್ರವಾಹನಗಳು ಸಂಚರಿಸಿ, ರೇಲ್ವೆ ನಿಲ್ದಾಣಕ್ಕೆ ಹೋಗಲು ಬಳಸುತ್ತಿರುವುದು ನಗರಸಭೆಯ ಗಮನಕ್ಕೆ ಬಂದಿದ್ದು, ನಿಗದಿಯಾಗಿರುವ ರಸ್ತೆ ಉಪಯೋಗಿಸದೆ ನಗರಸಭೆಯ ರಸ್ತೆಯನ್ನು ಬಳಸುವುದು ಸರಿಯಲ್ಲ. ಇದು ಸಾರ್ವತ್ರಿಕ ರಸ್ತೆಯಲ್ಲವಾದ್ದರಿಂದ ನಗರಸಭೆ ಕಚೇರಿ ಕೆಲಸಗಳಿಗೆ, ನಗರಸಭೆಗೆ ಬರುವ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಅವಧಿ ವಿಸ್ತರಣೆ
ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಅಟಲಬಿಹಾರಿ ವಾಜಪೇಯಿ ಮಾದರಿ ವಸತಿ ಶಾಲೆಗಳಿಗೆ ನಡೆಯುವ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಸಲ್ಲಿಸುವ ದಿನಾಂಕವನ್ನು ಮಾ. 2 ರ ಸಂಜೆ 5-30ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.