ನಾಳೆ ತುಮಕೂರಿಗೆ ಲಾಮಾ
ಕ.ಪ್ರ.ವಾರ್ತೆ ಟಿ ತುಮಕೂರು ಟಿ ಮಾ.4
ತುಮಕೂರು ವಿವಿ ಹಾಗೂ ಬೈಲಕುಪ್ಪೆಯ ಸೆರಾ ಜೆ ಮೊನಾಸ್ಟಿಕ್ ಯೂನಿವರ್ಸಿಟಿ ಆಶ್ರಯದಲ್ಲಿ ಭಗವಾನ್ ಬುದ್ಧನ ಚಿಂತನೆ ಕುರಿತು ಮಾ. 6 ರಂದು ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ದಲೈಲಾಮ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ವಿವಿ ಕುಲಪತಿ ಎಸ್.ಸಿ. ಶರ್ಮ ವಹಿಸಲಿದ್ದಾರೆ. ಕುಲಸಚಿವ ಪ್ರೊ. ಡಿ. ಶಿವಲಿಂಗಯ್ಯ, ಸೆರಾ ಜೆ ಮೊನಾಸ್ಟಿಕ್ ಯೂನಿವರ್ಸಿಟಿಯ ಅಬೋಟ್ ಗೆಶೆ ಲೊಬ್ಸಾಂಗ್ ಡೆಲೆಕ್ ಮತ್ತಿತರರು ಉಪಸ್ಥಿತರಿರುವರು. ತುಮಕೂರು ವಿಶ್ವವಿದ್ಯಾನಿಲಯದ ಡಾ. ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಜರುಗಲಿದೆ. ಇದೇ ಸಂದರ್ಭ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್, ಮುಂಬೈ ಇದರ ನಿರ್ದೇಶಕ ಡಾ. ಎಸ್. ಪರಶುರಾಮನ್ ಅವರಿಗೆ ತುಮಕೂರು ವಿಶ್ವವಿದ್ಯಾನಿಲಯದ ವಿಶಿಷ್ಟ ಗೌರವ ಪ್ರಾಧ್ಯಾಪಕ ಪದವಿ ಪ್ರದಾನ ಮಾಡಲಾಗುವುದು.