ಪಾರ್ಟಿ ಮೇಲೆ ದಿಢೀರ್ ದಾಳಿ
ಕ.ಪ್ರ. ವಾರ್ತೆ ಟಿ ಪಾವಗಡ ಟಿ ಮಾ. 4 ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಪುರಸಭೆ ವ್ಯಾಪ್ತಿಯ ತೋಟವೊಂದರಲ್ಲಿ ಏರ್ಪಡಿಸಿದ್ದ ಪಾರ್ಟಿಯೊಂದರ ಮೇಲೆ ದಿಢೀರ್ ದಾಳಿ ಮಾಡಿದ ತಹಸೀಲ್ದಾರ್ ಮಹಮ್ಮದ್ ಆಲ್ತಪ್ ಪಾಷ ಹಾಗೂ ಸಿಪಿಐ ಶೇಷಾದ್ರಿ ಪಾರ್ಟಿಯನ್ನು ರದ್ದುಪಡಿಸಿ ಪ್ರಕರಣ ದಾಖಲಿಸಿದ್ದಾರೆ. ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡ ನಿಯಮ ಉಲ್ಲಂಘಿಸಿ ಅಭ್ಯರ್ಥಿಯೊಬ್ಬರ ಪರ ಬೆಂಬಲಿಗರು ಪುರಸಭೆ ವ್ಯಾಪ್ತಿಗೆ ಬರುವ ತೋಟದಲ್ಲಿ ಮಾಂಸ, ಮದ್ಯ ಪಾರ್ಟಿಯೊಂದನ್ನು ಏರ್ಪಡಿಸಿದ್ದರು. ಇದರ ಮಾಹಿತಿಯನ್ನು ಪಡೆದ ಮಧುಗಿರಿ ಉಪವಿಭಾಗಧಿಕಾರಿ ಸಿ.ಅನಿತಾ ಅವರ ಆದೇಶದ ಮೇರೆಗೆ ಇಲ್ಲಿನ ಚುನಾವಣಾ ಅಧಿಕಾರಿ ಮಹಮ್ಮದ್ ಆಲ್ತಪ್ ಪಾಷ, ಸಿಪಿಐ ಶೇಷಾದ್ರಿ ಹಾಗೂ ಪಿಎಸ್ಐ ರಾಮಕೃಷ್ಣಪ್ಪ ದಿಢೀರ್ ದಾಳಿ ಮಾಡಿ ಮದ್ಯ ಮಾಂಸದ ಪಾರ್ಟಿಯನ್ನು ವಿಡಿಯೋ ಮಾಡಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.