ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಜೆಪಿ ತೊರೆದು ಜೆಡಿಎಸ್ ತೆಕ್ಕೆಗೆ ಚಂದ್ರೇಶ್, ಧರೀಶ್

Rashmi Kasaragodu
Updated On : 4 Mar 2013, 11:19 am

ಕ.ಪ್ರ. ವಾರ್ತೆ ಟಿ ತುರುವೇಕೆರೆ ಟಿ ಮಾ.4
ತಾಲೂಕಿನ ಪ್ರಮುಖ ಪ್ರಥಮ ದರ್ಜೆ ಗುತ್ತಿಗೆದಾರ ದೊಡ್ಡಾಘಟ್ಟದ ಡಿ.ಎಂ. ಚಂದ್ರೇಶ್, ಶಾಸಕ ಎಂ.ಟಿ.ಕೃಷ್ಣಪ್ಪ ಅವರ ಸಮ್ಮುಖ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾದರು.
ಚಂದ್ರೇಶ್, ಜಗ್ಗೇಶ್ ಅವರೊಂದಿಗೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಬಿಜೆಪಿ ಸರ್ಕಾರದಲ್ಲಿನ ಮುಗಿಲು ಮುಟ್ಟಿದ ಭ್ರಷ್ಟಾಚಾರ, ಒಳ ಕಿತ್ತಾಟ, ರೈತವಿರೋಧಿ ನಿಲುವುಗಳು ತಮ್ಮನ್ನು ಬಿಜೆಪಿಯಿಂದ ದೂರ ಸರಿಯುವಂತೆ ಮಾಡಿದವು. ಯಡಿಯೂರಪ್ಪನವರ ಸ್ವಹಿತಾಸಕ್ತಿಯಿಂದ ಬಿಜೆಪಿ ಛಿದ್ರವಾಗಿದೆ. ಮುಂಬರುವ ದಿನಗಳು ಪ್ರಾಮಾಣಿಕ ಕಾರ್ಯಕರ್ತರಿಗೆ ನೋವು ತರುವಂತಹವು ಎಂದು ತಿಳಿದು ಬಿಜೆಪಿ ತ್ಯಜಿಸುತ್ತಿರುವುದಾಗಿ ಹೇಳಿದರು. ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ನೀಡಿದ ಜನಪರ ಆಡಳಿತ, ಸ್ಥಳೀಯವಾಗಿ ಶಾಸಕ ಎಂ.ಟಿ.ಕೃಷ್ಣಪ್ಪನವರು ತಾಲೂ ಕಿನ ಅಭಿವೃಧ್ಧಿಗೆ ಮಾಡಿರುವ ಶ್ರಮ, ಕಾರ್ಯಕರ್ತರ ಹಿತ ಕಾಪಾಡುವಿಕೆ, ಅಭಿವೃಧ್ಧಿಯೇ ತಮ್ಮ ಉಸಿರು ಎಂದು ತಿಳಿದಿರುವ ಶಾಸಕರ ಕೈಬಲ ಪಡಿಸುವುದರಿಂದ ತಾಲೂಕು ಮತ್ತೂ ಅಭಿವೃದ್ಧಿ ಕಾಣುವುದು ಎಂಬ ಕಾರಣದಿಂದ ತಮ್ಮೊಂದಿಗೆ ತಮ್ಮ ಬೆಂಬಲಿರು ಹಾಗೂ ಹಿತೈಷಿಗಳು ಜೆಡಿಎಸ್‌ಗೆ ಸೇರ್ಪಡೆಗೊಂಡಿರುವುದಾಗಿ ಡಿ.ಎಂ.ಚಂದ್ರೇಶ್ ತಿಳಿಸಿದರು. ಶಾಸಕ ಎಂ.ಟಿ.ಕೃಷ್ಣಪ್ಪ, ಜೆಡಿಎಸ್‌ನ ತಾಲೂಕು ವಕ್ತಾರ ಡಾ.ಬಿ.ನಂಜಪ್ಪ, ಬೆಂಗಳೂರು ನಗರ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಗಂಗಾಧರ ಗೌಡ, ತಾಲೂಕು ಅಧ್ಯಕ್ಷ ಸ್ವಾಮಿಯವರ ಸಮ್ಮುಖ ಡಿ.ಎಂ.ಚಂದ್ರೇಶ್ ರವರೊಂದಿಗೆ ಮತ್ತೊಬ್ಬ ಗುತ್ತಿಗೆದಾರ ಡಿ.ಜಿ. ಲಕ್ಷ್ಮಣಕುಮಾರ (ಧರೀಶ್), ನಂಜುಂಡಪ್ಪ, ಡಿ.ಕೆ. ಮಂಜುನಾಥ್ ಇತರರು ಸೇರ್ಪಡೆಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement