ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಜೆಪಿ ಪ್ರಣಾಳಿಕೆ

Rashmi Kasaragodu
Updated On : 4 Mar 2013, 11:18 am

ತುಮಕೂರು: ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಸಾಂಸ್ಥಿಕ ಆಡಳಿತಾತ್ಮಕ ಸುಧಾರಣೆ, ಎಲ್ಲ ಹಂತಗಳಲ್ಲಿ ಪಾರದರ್ಶಕತೆ. ವಾರ್ಡ್ ಸಮಿತಿಗಳ ಕಟ್ಟುನಿಟ್ಟು ರಚನೆ. ದೂರುಗಳಿಗಾಗಿ ಆನ್‌ಲೈನ್, ದೂರವಾಣಿ ನಿರ್ವಹಣಾ ಕೇಂದ್ರಗಳ ಸ್ಥಾಪನೆ. ಪಾರದರ್ಶಕತೆ ಕಾಪಾಡಲು ಕಂಪ್ಯೂಟರೀಕರಣ, ನಗರದ ಸಕಲ ಆಸ್ತಿಯನ್ನು ಭೌಗೋಳಿಕ ಸಮೀಕ್ಷೆ ಮೂಲಕ ವಿಂಗಡಣೆ, ಪ್ರತಿ ಆಸ್ತಿಗೂ ಗುರುತಿನ ಸಂಖ್ಯೆ, ಪಾರ್ಕ್‌ಗಳ ಸರ್ವಾಂಗೀಣ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ಕಸಮುಕ್ತ ನಗರಕ್ಕೆ ಆದ್ಯತೆ. ಹೊಸ ನಗರ ಅರಣ್ಯಗಳ ನಿರ್ಮಾಣ. ಪ್ಲಾಸ್ಟಿಕ್‌ಮುಕ್ತ ನಗರ. ಎಲ್ಲ ಸಮುದಾಯಗಳ ಸ್ಮಶಾನ ಅಭಿವೃದ್ಧಿ ಯೋಜನೆ. ನಗರ ಸಾರಿಗೆ ಯೋಜನೆಗೆ ಹಾಲಿ ಇರುವ ಬಸ್‌ಗಳ ಜತೆ ಮತ್ತೆ 50 ಬಸ್ಸುಗಳ ಸೇರ್ಪಡೆ. ಶವ ಸಾಗಿಸುವ ವಾಹನ ಪ್ರತಿ ವಾರ್ಡ್‌ನಲ್ಲಿ ಸೈಕಲ್ ಟ್ರ್ಯಾಕ್. ಎಲ್ಲ ಆಡಳಿತ ಇ ಆಡಳಿತಕ್ಕೆ ಸೇರ್ಪಡೆ. ಖಾಸಗಿ, ಸರ್ಕಾರಿ ಸುಸಜ್ಜಿತ ಬಸ್ ನಿಲ್ದಾಣ ಸೇರಿದಂತೆ ಇತರೆ ಭರವಸೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement