ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಚುನಾವಣೆ: ಪೊಲೀಸರ ನಿಯೋಜನೆ

Rashmi Kasaragodu
Updated On : 6 Mar 2013, 12:20 pm

ತುಮಕೂರು: ತುಮಕೂರು ಜಿಲ್ಲೆಯಾದ್ಯಂತ ಮಾ. 7 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಕೆಳಕಂಡಂತೆ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ ತಿಳಿಸಿದ್ದಾರೆ. ಎಎಸ್ಪಿ 1, ಡಿಎಸ್ಪಿ 5, ಇನ್ಸ್‌ಪೆಕ್ಟರ್ 16, ಪಿಎಸ್‌ಐ 48, ಮುಖ್ಯ ಪೇದೆ ಮತ್ತು ಪೇದೆ ಸೇರಿ 700 ಮಂದಿ, 3 ಕೆಎಸ್‌ಆರ್‌ಪಿ ತುಕಡಿ, ಡಿಆರ್ 10 ತುಕಡಿ ಹಾಗೂ 220 ಮಂದಿ ಹೋಂಗಾರ್ಡ್ಸ್‌ಗಳನ್ನು ನಿಯೋಜಿಸಲಾಗಿದೆ.
ಕಾವೇರಿ ದಂಡೆಯಲ್ಲಿ ಸೋಪಾನ ಕಟ್ಟೆಗೆ ಆಗ್ರಹ
ರಾಮನಾಥಪುರ: ರಾಮನಾಥಪುರ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಚತುರ್ಯುಗ ಮೂರ್ತಿ ರಾಮೇಶ್ವರಸ್ವಾಮಿ ದೇವಸ್ಥಾನದ ಹೊಂದಿಕೊಂಡಿರುವ ಕಾವೇರಿ ನದಿಯ ದಂಡೆಗೆ ಸೋಪಾನ ಕಟ್ಟೆ ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಾವೇರಿ ನದಿಯಲ್ಲಿರುವ ದೇವರ ಮೀನುಗಳನ್ನು ನೋಡಲು ಪ್ರತಿನಿತ್ಯ ಸಾವಿರಾರು ಭಕ್ತರು ಬರುತ್ತಿದ್ದಾರೆ. ಹೀಗಾಗಿ ಕಾವೇರಿ ನದಿಯಲ್ಲಿರುವ ವಹ್ನಿ ಪುಷ್ಕರಣಿಗೆ ಹೋಗುವ ಸ್ಥಳಕ್ಕೆ ಉತ್ತಮ ರೀತಿ ಕಲ್ಲು ಹಾಸಿನ ಸೋಪಾಲ ಕಟ್ಟೆ ನಿರ್ಮಿಸಿಕೊಡುವ ಬಗ್ಗೆ ತಾಲೂಕು ಮುಜರಾಯಿ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಭಾವೈಕ್ಯತಾ ಶಿಬಿರ
ಹಾಸನ: ಕೇರಳ ರಾಜ್ಯದ ತಿರುವನಂತಪುರದಲ್ಲಿ 2012ನೇ ಸಾಲಿನ ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ಮೇ 8ರಿಂದ 12ರವರೆಗೆ ಏರ್ಪಡಿಸಲಾಗಿದೆ. ಶಿಬಿರಕ್ಕೆ ಹಾಸನ ಜಿಲ್ಲೆಯಿಂದ ಭಾಗವಹಿಸುವ ಸಾಂಸ್ಕೃತಿಕ ಹಾಗೂ ಸಾಂಪ್ರಾದಾಯಿಕ ಪ್ರಕಾರಗಳಲ್ಲಿ ಯುವಕ, ಯುವತಿಯರನ್ನು ಪ್ರತಿಭೆ ಅನುಸಾರ ಆಯ್ಕೆ ಮಾಡಿ ನಿಯೋಜಿಸಲಾಗುವುದು. ಆದ್ದರಿಂದ  ಈ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಲು ಇಚ್ಚೆಯುಳ್ಳ ಹಾಸನ ಜಿಲ್ಲೆಯ 15 ರಿಂದ 40 ವಯಸ್ಸಿನ ಯುವಕ ಯುವತಿಯರು ಮಾರ್ಚ್ 11ರೊಳಗಾಗಿ ಅರ್ಜಿಯನ್ನು ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಸಾಲಗಾಮೆ ರಸ್ತೆ, ಹಾಸನ (ದೂರವಾಣಿ 246056) ಇವರಿಗೆ ಸಲ್ಲಿಸಲು ಕೋರಲಾಗಿದೆ.
ಜಿಲ್ಲಾ ಟೆನಿಸ್‌ಬಾಲ್ ಕ್ರಿಕೆಟ್ ಟೂರ್ನಿ
ಹಾಸನ: ತಾಲೂಕಿನ ಮೊಸಳೆ ಹೊಸಳ್ಳಿಯ ಎಚ್.ಡಿ. ದೇವೇಗೌಡ ಯುವಕ ಸಂಘದಿಂದ  ಮಾ. 9 ಮತ್ತು 10 ರಂದು 26 ನೇ ವರ್ಷದ ಜಿಲ್ಲಾ ಮಟ್ಟದ ಟಿನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಏರ್ಪಡಿಸಲಾಗಿದೆ. ಮೊಸಳೆ ಹೊಸಳ್ಳಿಯಿಂದ ಕಾಲೇಜು ಮೈದಾನದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಭಾಗವಹಿಸಲಿಚ್ಚಿಸುವ ತಂಡಗಳು ಮೊ. 9964828208, 99803 47983 ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement