ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪತ್ನಿ ನಾಗರತ್ನಮ್ಮ ಬೆಂಬಲಿಸಿ: ಪತಿ ಕರಿಯಣ ಮನವಿ

Rashmi Kasaragodu
Updated On : 6 Mar 2013, 12:20 pm

ಕನ್ನಡಪ್ರಭ ವಾರ್ತೆ  ಪಾವಗಡ  ಮಾ.5
ಕಳೆದ 25 ವರ್ಷಗಳಿಂದ ರಾಜಕೀಯ ಪಕ್ಷಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸೇವೆ ಮಾಡಿದ್ದರೂ ಕೆಲ ರಾಜಕಾರಣಿಗಳು ಗೆದ್ದ ನಂತರ ನಮ್ಮನ್ನು ಕಡೆಗಣಿಸಿ ಅನ್ಯಾಯ ಮಾಡಿದ ಕಾರಣ ಪುರಸಭೆ ಚುನಾವಣೆಯಲ್ಲಿ ತಮ್ಮ ಪತ್ನಿ  ನಾಗರತ್ನಮ್ಮ ಸ್ವತಂತ್ರ ಅಭ್ಯರ್ಥಿಯಾಗಿ ಸ್ವರ್ಧಿಸಿದ್ದು ಅವರನ್ನು ಬೆಂಬಲಿಸುವಂತೆ ಮುಖಂಡ ಹಾಗೂ ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎಸ್.ಸಿ.ಕರಿಯಣ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪಕ್ಷ ಸಂಘಟನೆ ಸೇರಿದಂತೆ ತಾಲೂಕು ಅಭಿವೃದ್ಧಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಲ್ಲಿ  ತೊಡಗಿಸಿಕೊಂಡು ಕಳೆದ 20ವರ್ಷಗಳಿಂದ ಸೇವೆ ಮಾಡುತ್ತಿದ್ದೇವೆ.
ಆದರೆ ಇದುವರೆವಿಗೂ ವಿವಿಧ ಪಕ್ಷದ ಮುಖಂಡರು ನಮ್ಮನ್ನು ಬಳಸಿಕೊಂಡು ಚುನಾವಣೆಯಲ್ಲಿ ಗೆದ್ದ ನಂತರ ನಮ್ಮನ್ನು ಕಡೆಗಣಿಸುವುದಲ್ಲದೆ ಮಾನಸಿಕವಾಗಿ ನೋವು ಉಂಟುಮಾಡಿದ್ದಾರೆ. 7ನೇ ವಾರ್ಡಿನಿಂದ ಪುರಸಭೆ ಚುನಾವಣೆಗೆ ತಮ್ಮ ಪತ್ನಿ ನಾಗರತ್ನಮ್ಮ ಸ್ಪರ್ಧಿಸಿದ್ದು  ಅವರನ್ನು ಬೆಂಬಲಿಸಿ ಎಂದು ಅವರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement