ಪರೀಕ್ಷಾ ಭಯ ಓಡಿಸುವ ವಿಶಿಷ್ಟ ಕಾರ್ಯಕ್ರಮ
ಕ.ಪ್ರ. ವಾರ್ತೆ ತುಮಕೂರು ಮಾ.5
ಶಿರಾ ತಾಲೂಕು ಚಿಕ್ಕನಹಳ್ಳಿ ಸರ್ಕಾರಿ ಎಸ್‌ಕೆವಿಡಿ ಪದವಿ ವೂರ್ವ ಕಾಲೇಜು ವತಿಯಿಂದ ವಿವಿಧ ಹಳ್ಳಿಗಳಿಗಳಲ್ಲಿ ಮನೆ-ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಪರೀಕ್ಷಾ ಭಯ ಹೋಗಲಾಡಿಸುವುದು, ಓದಿನ ಬಗ್ಗೆ ತಿಳುವಳಿಕೆ ಮೂಡಿಸುವ ದೃಷ್ಟಿಯಿಂದ ಕಾಲೇಜಿನ ಪ್ರಿನ್ಸಿಪಾಲ್ ಎನ್. ನಾಗಪ್ಪ ತಮ್ಮ ಕಾಲೇಜು ಹಾಗೂ ಪ್ರೌಡಶಾಲೆಯ ಶಿಕ್ಷಕರನ್ನು ತಮ್ಮೊಂದಿಗೆ ಹತ್ತಾರು ಹಳ್ಳಿಗಳ ಮನೆ-ಮನೆಗೆ ಕರೆದೊಯ್ದು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಚಿಕ್ಕನಹಳ್ಳಿ ಗ್ರಾಪಂ ಅಧ್ಯಕ್ಷರಾದ ಕೃಷಮೂರ್ತಿ ಮಾತನಾಡಿ, ಪರೀಕ್ಷಾ ಸಮಯದಲ್ಲಿ ಇದೊಂದು ಅರಿವು ಮೂಡಿಸುವ ಕಾರ್ಯಕ್ರಮವಾಗಿದೆ. ಪೋಷಕರು ಮಕ್ಕಳ ಓದಿನ ಕಡೆಗೆ ಹೆಚ್ಚಿನ ಗಮನಕೊಡಿ. ಓದು ಮಕ್ಕಳ ಆಸ್ತಿ ಎಂದು ತಿಳಿಸಿದರು.
ಎ. ಈಶ್ವರೀ ಪ್ರಸಾದ್ ಮಾತನಾಡಿ, ಮನೆ-ಮನೆ ಭೇಟಿಯಿಂದ ಕಳೆದ ಭಾರಿ ಶೇ. 98 ರಷ್ಟು ಫಲಿತಾಂಶ ಬರಲು ಕಾಲೇಜಿನ ಪ್ರಿನ್ಸಿಪಾಲ್, ಎನ್. ನಾಗಪ್ಪ ಹಾಗೂ ಸಿಬ್ಬಂದಿ ಕಾರಣ. ಆದ್ದರಿಂದ ಈ ವರ್ಷವೂ ಕೂಡ ಈ ಸುಡುವ ಬಿಸಿಲಿನಲ್ಲಿ ಸ್ವಂತ ಖರ್ಚಿನಲ್ಲಿ ಹಳ್ಳಿ ಹಳ್ಳಿಗೆ ಹೋಗುತ್ತಿದ್ದೇವೆ ಎಂದರು.
ಕಾಲೇಜಿನ ಪರವಾಗಿ ಪ್ರಾಂಶುಪಾಲ ಎನ್. ನಾಗಪ್ಪ, ಉಪನ್ಯಾಸಕರಾದ ಯಶವಂತ್ ಇತರರು ಇದ್ದರು.