9 ರಂದು ಮಹಿಳಾ ದಿನಾಚರಣೆ
ಕಪ್ರ ವಾರ್ತೆ, ತುಮಕೂರು, ಮಾ.6 ತುಮಕೂರಿನ ವರದಕ್ಷಿಣೆ ವಿರೋಧಿ ವೇದಿಕೆ ವತಿಯಿಂದ ಮಾ.9 ರಂದು ಬೆಳಗ್ಗೆ 10-30 ಕ್ಕೆ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ, ವಿಚಾರ ಸಂಕಿರಣ, ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಅತ್ಯಾಚಾರ ಒಂದು ಸಾಮಾಜಿಕ ಶಾಪ, ಕಾರಣ ಹಾಗೂ ಪರಿಹಾರೋಪಾಯಗಳು ವಿಚಾರ ಸಂಕಿರಣ ಏರ್ಪಾಟಾಗಿದೆ. ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ಎಂ. ರಜನಿ ಉದ್ಘಾಟಿಸಲಿದ್ದಾರೆ. ಸಾಹಿತಿ, ಚಿಂತಕಿ ಬಾ.ಹ. ರಮಾಕುಮಾರಿ ಆಶಯ ನುಡಿಗಳನ್ನಾಡಲಿದ್ದಾರೆ. ಅತ್ಯಾಚಾರ-ಸಾಮಾಜಿಕ ಪರಿಣಾಮಗಳು, ಮಾಧ್ಯಮಗಳ ಪಾತ್ರ ಕುರಿತು ಪತ್ರಕರ್ತೆ ಸುಚೇತನಾ ನಾಯ್ಕ, ನ್ಯಾಯ ದೊರಕಿಸಿಕೊಡುವಲ್ಲಿ ವಕೀಲರ ಪಾತ್ರ ಕುರಿತು ಗೀತಾ ಜಗದೀಶ್, ನ್ಯಾಯದೊರಕಿಸುವಲ್ಲಿ ಪೊಲೀಸರ ಪಾತ್ರ ಕುರಿತು ಕುಣಿಗಲ್ ಡಿವೈಎಸ್ಪಿ ಉಮಾರಾಣಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎನ್. ಸುಜಾತ ಪಾಲ್ಗೊಳ್ಳಲ್ಲಿದ್ದಾರೆ.