ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಚುನಾವಣೆಗೆ ಸಿದ್ಧತೆ

Rashmi Kasaragodu
Updated On : 7 Mar 2013, 12:26 pm

ಕನ್ನಡಪ್ರಭ ವಾರ್ತೆ  ಕುಣಿಗಲ್  ಮಾ.6
ಮುಕ್ತ ಹಾಗೂ ನ್ಯಾಯಯುತ ಪುರಸಭೆ ಚುನಾವಣೆಗಳನ್ನು ನಡೆಸಲು ತಾಲೂಕು ಆಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ತಹಸೀಲ್ದಾರ್ ಎನ್.ಸಿ.ಜಗದೀಶ್ ತಿಳಿಸಿದರು.  ಬುಧವಾರ, ಪಟ್ಟಣದ ಮಹಾತ್ಮಗಾಂಧಿ ಪ.ಪೂ.ಕಾಲೇಜಿನಲ್ಲಿ ಪುರಸಭೆ-2013ರ ಚುನಾವಣೆಗಳ  ಪೂರ್ವಭಾವಿಯಾಗಿ, ಮತಗಟ್ಟೆ ಅಧಿಕಾರಿಗಳ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಮತದಾನ ಕೇಂದ್ರ ಸುತ್ತಲೂ ಬಿಗಿಪೊಲೀಸ್ ಬಂದೋಬಸ್ತ್‌ಗೆ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.  ಪಟ್ಟಣದ 23 ವಾರ್ಡ್‌ಗಳಲ್ಲಿ 29 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇವುಗಳ ಪೈಕಿ 10 ಅತಿಸೂಕ್ಷ್ಮ, 12 ಸೂಕ್ಷ್ಮ, 7 ಸಾಮಾನ್ಯ ಮತಗಟ್ಟೆಗಳು ಸ್ಥಾಪಿಸಲಾಗಿದ್ದು ಒಟ್ಟಾರೆ 132 ವಿವಿಧ ಹಂತದ ಮತಗಟ್ಟೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement