ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ
ಕ.ಪ್ರ. ವಾರ್ತೆ ಟಿ ಪಾವಗಡ ಟಿ ಮಾ.6:
ಭಗತ್‌ಸಿಂಗ್ ಕ್ರಿಕೆಟ್ ಕ್ಲಬ್ ವೈ.ಎನ್ ಹೊಸಕೋಟೆ ಆಶ್ರಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ 3ದಿನಗಳ ಅಂದರೆ ಮಾ. 9 ರಿಂದ 11ರವರೆಗೆ ಜಿಲ್ಲಾ ಮಟ್ಟದ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಚೌಡೇಶ್ವರಿ ದೇವಸ್ಥಾನದ ಪಕ್ಕದಲ್ಲಿರುವ ಮೈದಾನದಲ್ಲಿ ಏರ್ಪಾಡಿಸಲಾಗಿದೆ. 9ರಂದು ಬೆಳಿಗ್ಗೆ 11ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಮಾರಂಭವನ್ನು ಮಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಪಂ ಸದಸ್ಯರಾದ ಜಯಮ್ಮ ಎಸ್.ಟಿ. ನಾಗರಾಜ್ ವಹಿಸುವರು. ಮುಖ್ಯ ಅತಿಥಿಗಳಾಗಿ ಪುರಸಭೆ ಮಾಜಿ ಅಧ್ಯಕ್ಷ ಎ. ಶಂಕರರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯೆ ರೇಖಾ ಕೆ.ಓ. ಆಂಜನೇಯಲು ತಾಪಂ ಮಾಜಿ ಅಧ್ಯಕ್ಷೆ ಯಶೋದಮ್ಮ ಜಿ.ಬಿ.ದೇವರಾಜ್ ಹಾಗೂ ಗ್ರಾಪಂ ಅಧ್ಯಕ್ಷೆ ಸುಜಾತಮ್ಮ ಭಾಗವಹಿಸುವರು.ವಿಶೇಷ ಆಹ್ವಾನಿತರಾಗಿ ಗ್ರಾಪಂ ಸದಸ್ಯರುಗಳಾದ ಎಂ.ಸಿ.ಜಯರಾಮ್, ಲಕ್ಷ್ಮಿಶಂಕರ್, ಗೌರಮ್ಮ, ರಾಮಾಂಜಿನಪ್ಪ ಸೇರದಂತೆ ಎಲ್ಲಾ ಗ್ರಾಪಂ ಸದಸ್ಯರು ಭಾಗವಹಿಸುವರು. ಟೆನ್ನಿಸ್ ಕ್ರಿಕೆಟ್‌ನಲ್ಲಿ ವಿಜೇತರಾದ ತಂಡಗಳಿಗೆ ಪ್ರಥಮ ಬಹುಮಾನ 10ಸಾವಿರ ರು. ನಗದನ್ನು ಮಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ ನೀಡಲಿದ್ದು, ದ್ವಿತೀಯ ಬಹುಮಾನ ಬಿ.ಎಚ್.ನಾರಾಯಣಪ್ಪ ಜ್ಞಾಪಕಾರ್ಥವಾಗಿ ಬಿ.ಎನ್.ನಾಗರಾಜ್ ನೀಡಲಿದ್ದಾರೆ. ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ಪುರಸಭೆ ಮಾಜಿ ಅಧ್ಯಕ್ಷ ಎ.ಶಂಕರರೆಡ್ಡಿ, ಜಿಪಂ ಸದಸ್ಯೆ ಜಯಮ್ಮ, ಎಸ್.ಟಿ ನಾಗರಾಜ್, ರೇಖಾ ಕೆ.ಓ.ಅಂಜನೇಯಲು, ಮುಖಂಡ ಎಂ.ಎಸ್. ವಿಶ್ವನಾಥ್, ಗ್ರಾಪಂ ಸದಸ್ಯ ಎಂ.ಸಿ.ಜಯರಾಮ್, ಎಲ್.ಕೆ. ರಾಘವೇಂದ್ರ ಮುಂತಾದವರು ವಿತರಿಸಿಲಿದ್ದಾರೆ.
ವಿವರಗಳಿಗೆ ಪಿ.ಜೆ ಚೌಡಪ್ಪ 9611770885, ಬಿ.ಎನ್. ಶಂಕರ್ 8861288386, ಎಂ.ಎಚ್.ಪ್ರಸಾದ್ 9620015336 ಹಾಗೂ ಮುಖಂಡ ಗೋಪಾಲ್ ಸಂಪರ್ಕಿಸಲು ಮನವಿ ಮಾಡಿದ್ದಾರೆ.