ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದೌರ್ಜನ್ಯ ತಡೆ ಸಮಿತಿ ಪರಿಷ್ಕರಣೆಗೆ ಮುಖ್ಯೋಪಾಧ್ಯಾಯರ ಸಂಘ ಒತ್ತಾಯ

Rashmi Kasaragodu
Updated On : 7 Mar 2013, 12:28 pm

ಕ.ಪ್ರ.ವಾರ್ತೆ  ಮೈಸೂರು  ಮಾ.6 ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ರಚಿಸಿರುವ ಶಾಲೆಗಳಲ್ಲಿ ದೌರ್ಜನ್ಯ ತಡೆ ಸಮಿತಿ ಪರಿಷ್ಕರಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಶಾಖೆಯು ಒತ್ತಾಯಿಸಿದೆ.
ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳು, ಗೊಂದಲ, ಮಾನಸಿಕ ಒತ್ತಡ, ಕಿರುಕುಳಗಳಿಂದ ಬೇಸತ್ತ ನೌಕರರು ಆತ್ಮಹತ್ಯೆ ಹಾದಿ ತುಳಿದಿದ್ದಾರೆ. ಈ ಸಮಿತಿ ರದ್ದುಪಡಿಸಿ ಇಲಾಖೆಯ ವ್ಯಾಪ್ತಿಗೆ ವಿಸ್ತರಿಸುವಂತೆ ಜಿಲ್ಲಾಧ್ಯಕ್ಷ ಜೆ. ಜವರೇಗೌಡ, ಉಪಾಧ್ಯಕ್ಷ ಪಾಂಡರಂಗ ಕಾಳೆ, ಎಸ್. ಶಿವಶಂಕರ್, ಕಾರ್ಯದರ್ಶಿ ಡಿ. ಚಂದ್ರಮೋಹನ್ ಮನವಿ ಮಾಡಿದ್ದಾರೆ.


15ಕ್ಕೆ ಕಾರ್ಯಾಗಾರ
ಮೈಸೂರು: ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ವ್ಯಾಪಾರ ಕೇಂದ್ರ, ಜಿಲ್ಲಾ ಕೈಗಾರಿಕ ಕೇಂದ್ರ ಹಾಗೂ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಹಯೋಗದಲ್ಲಿ ಮಾ. 15 ರಂದು ಹೋಟೆಲ್ ರಿಗಾಲಿಸ್‌ನಲ್ಲಿ ಡಬ್ಲ್ಯೂಟಿಒ- ರಾಜ್ಯಗಳು ಮತ್ತು ಮಧ್ಯಸ್ಥಗಾರರ ಪರಿಣಾಮಗಳು ಕುರಿತ ಒಂದು ಕಾರ್ಯಾಗಾರ ಆಯೋಜಿಸಲಾಗಿದೆ. ಆಸಕ್ತರು ಮಾ. 11 ರೊಳಗೆ ಹೆಸರು ನೋಂದಾಯಿಸಬಹುದು. ಮೊ. 9945119833


ಕಿರುಕದನ: ಇಂದು ಕೋರ್ಟ್‌ಗೂ ರಜೆ
ಮೈಸೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಮಾ.7 ರಂದು ನ್ಯಾಯಾಲಯಗಳಿಗೂ ರಜೆ ಘೋಷಿಸಲಾಗಿದೆ. ಈ ಸಂಬಂಧ ರಾಜ್ಯ ಹೈಕೋರ್ಟ್‌ನಿಂದ ಬುಧವಾರ ಸುತ್ತೋಲೆ ಬಂದಿದೆ.


ಬಿಜೆಪಿ ಗೆದ್ದಿದ್ದು ಒಂದಲ್ಲ, 18 ಸ್ಥಾನ
ಮೈಸೂರು: 2007ರ ಮೈಸೂರು ನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು 1 ಅಲ್ಲ 18 ಸ್ಥಾನಗಳು. ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ 41ನೇ ವಾರ್ಡ್‌ನ ಬಿಜೆಪಿ ಸದಸ್ಯ ಎಂ. ನಾರಾಯಣಪ್ಪ ಅವರ ಸದಸ್ಯತ್ವ ಅನೂರ್ಜಿತಗೊಂಡಿದ್ದರಿಂದ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್. ರವೀಂದ್ರಕುಮಾರ್ ಗೆದ್ದಿದ್ದರು. ಬಿಜೆಪಿಯ ಸದಸ್ಯರ ಸಂಖ್ಯೆ 17ಕ್ಕೆ ಇಳಿದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement