ಮೈಸೂರಿಗೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಭೇಟಿ
ಮೈಸೂರು: ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಬುಧವಾರ ಮೈಸೂರಿಗೆ ಭೇಟಿ ನೀಡಿದ್ದರು. ನಜರ್ಬಾದ್ನ ಸರ್ಕಾರಿ ಅತಿಥಿಗೃಹದಲ್ಲಿ ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ, ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್ ಮೊದಲಾದವರು ಆವರನ್ನು ಬರಮಾಡಿಕೊಂಡರು. ನಂತರ ರಾಜ್ಯಪಾಲರು ಇನ್ಫೋಸಿಸ್ನ ಜಾಗತಿಕ ಶಿಕ್ಷಣ ಕೇಂದ್ರದಲ್ಲಿ ಕಾನೂನು ಶಾಲೆಗಳ ಅಂತರ್ ರಾಷ್ಟ್ರೀಯ ಸಂಸ್ಥೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು, ನಂತರ ಬೆಂಗಳೂರಿಗೆ ಮರಳಿದರು.