ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಉತ್ಸಾಹ ತೋರಿದ ಮತದಾರ

Rashmi Kasaragodu
Updated On : 8 Mar 2013, 12:01 pm

ಕನ್ನಡಪ್ರಭ ವಾರ್ತೆ  ಕುಣಿಗಲ್  ಮಾ.7
ಗುರುವಾರ ನಡೆದ ಪುರಸಭಾ ಚುನಾವಣೆಯಲ್ಲಿ, ಮತದಾರರ ಪಟ್ಟಿ ಗೊಂದಲಗಳಿಂದ ಕೂಡಿ, ಏಳನೆ ವಾರ್ಡ್ನಲ್ಲಿ ಮತದಾನ ಮುಂದೂಡಬೇಕೆಂದು ಅಭ್ಯರ್ಥಿಗಳ ಆಗ್ರಹದ ನಡುವೆಯೂ  ಶಾಂತಿಯುತವಾಗಿ ನಡೆದಿದೆ.
ಬೆಳಗಿನಿಂದಲೇ 23 ವಾರ್ಡ್ಗಳ 29 ಮತಗಟ್ಟೆಗಳ ಬಳಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡರೆ, 11ನೇ ವಾರ್ಡ್ನ ಮತಗಟ್ಟೆ ಅಧಿಕಾರಿಗಳು, ಬಿಜೆಪಿ ಅಭ್ಯರ್ಥಿಗಳ ಪರ ಶಾಮೀಲಾಗಿ, ಬುಧವಾರ ರಾತ್ರಿಯೇ, ಅಧಿಕಾರಿಗಳು ಅಭ್ಯರ್ಥಿಯ ಆತಿಥ್ಯ ಪಡೆದು, ಗುರುವಾರ ಚುನಾವಣೆ ಸಮಯಕ್ಕೆ ಮುಂಚಿತವಾಗಿಯೇ  ಮತದಾನಕ್ಕೆ ಅವಕಾಶ ಮಾಡಿಕೊಟ್ಟು ಅಕ್ರಮ ಎಸಗಿದ್ದಾರೆಂದು ಆರೋಪಿಸಿ, ಶಾಸಕ ಬಿ.ಬಿ.ರಾಮಸ್ವಾಮಿಗೌಡ ಖಂಡಿಸಿ, ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಯ ವಿರುದ್ಧ ರಾಜ್ಯಚುನಾವಣಾ ಆಯೋಗಕ್ಕೆ  ಫ್ಯಾಕ್ಸ್  ಮೂಲಕ ದೂರು ನೀಡಿದರು.
ಮತದಾನ ಪ್ರಕ್ರಿಯೆ ಪ್ರಾರಂಭಗೊಂಡು ಕೆಲವೆ ನಿಮಿಷಗಳಲ್ಲಿ, ಪುರಸಭೆಯ ಏಳನೆ ವಾರ್ಡ್ನಲ್ಲಿ, ಅಭ್ಯರ್ಥಿಗಳಿಗೆ ನೀಡಲಾಗಿರುವ ಮತದಾರರ ಪಟ್ಟಿ ಬೇರೆಯದಾಗಿದ್ದು, ಅಧಿಕಾರಿಗಳ ಬಳಿ ಮತ್ತೊಂದು ಪಟ್ಟಿ ಇದ್ದು, ಬಹುತೇಕ ಮತದಾರರ ಹೆಸರು ಕೈಬಿಟ್ಟು ಹಲವರು ಮತದಾನ ಪ್ರಕ್ರಿಯೆಯಿಂದ ವಂಚಿತರಾದಾಗ, ಎಚ್ಚೆತ್ತ ಅಭ್ಯರ್ಥಿಗಳು, ಮತದಾರರ ಪಟ್ಟಿ ಪರಿಶೀಲಿಸಿದರು. ತಮ್ಮ ಬಳಿ ಬೇರೊಂದು ಮತ ಪಟ್ಟಿ ಇರುವುದರಿಂದ ಗೊಂದಲಕ್ಕೊಳಗಾಗಿ ತಹಸೀಲ್ದಾರ್ ಕಚೇರಿಗೆ ಆಗಮಿಸಿ, ಕಾಂಗ್ರೆಸ್ನ ಅಕ್ಬರ್ ಇತರರು ಚುನಾವಣೆ ಮುಂದೂಡುವಂತೆ ಆಗ್ರಹಿಸಿದರು. ದೋಷಪೂರಿತ ಮತದಾರರ ಪಟ್ಟಿ ನೀಡಿರುವ ಅಧಿಕಾರಿಗಳ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಅಭ್ಯರ್ಥಿಗಳನ್ನು ಬೆಂಬಲಿಸಿ ಜೆಡಿಎಸ್ ಮುಖಂಡ ಜಗದೀಶ್, ನಾಗರಾಜ್, ತಹಸೀಲ್ದಾರ್ರೊಂದಿಗೆ ವಾಗ್ವಾದ ನಡೆಸಿದರು. ಆದರೆ ಪ್ರಯೋಜನವಾಗಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement