ಜಿಲ್ಲೆಯಲ್ಲಿ ಶೇ. 80.4 ಮತದಾನ ಶಿರಾದಲ್ಲಿ ಹೆಚ್ಚು ಚಲಾವಣೆ
ತುಮಕೂರು: ತುಮಕೂರು ಜಿಲ್ಲೆಯ 3 ನಗರಸಭೆ, 4 ಪುರಸಭೆ ಹಾಗೂ 3 ಪಟ್ಟಣ ಪಂಚಾಯತ್ಗೆ ಗುರುವಾರ ನಡೆದ ಚುನಾವಣೆಯಲ್ಲಿ ಶೇ. 80.4 ರಷ್ಟು ಮತದಾನವಾಗಿದೆ. ಅತಿ ಹೆಚ್ಚು ಮತದಾನ ಶಿರಾದಲ್ಲಿ ಆಗಿದ್ದರೆ ಕಡಿಮೆ ಮತದಾನ ತುಮಕೂರು ನಗರದಲ್ಲಿ ಆಗಿದೆ. ತುಮಕೂರಿನಲ್ಲಿ ಶೇ. 68, ಶಿರಾದಲ್ಲಿ ಶೇ. 80.81, ತಿಪಟೂರಿನಲ್ಲಿ ಶೇ. 80 ಮತದಾನವಾಗಿದೆ. ಹಾಗೆಯೇ ಮಧುಗಿರಿಯಲ್ಲಿ ಶೇ. 77, ಕುಣಿಗಲ್ ಶೇ. 84.04, ಚಿಕ್ಕನಾಯಕನಹಳ್ಳಿಯಲ್ಲಿ ಶೇ. 83.33, ಪಾವಗಡದಲ್ಲಿ ಶೇ. 82 ರಷ್ಟು ಮತದಾನವಾಗಿದೆ. ಉಳಿದಂತೆ ತುರುವೇಕೆರೆಯಲ್ಲಿ ಶೇ. 77.39 ರಷ್ಟು ಮತದಾನವಾಗಿದೆ. ಗುಬ್ಬಿ 80.43 ಹಾಗೂ ಕೊರಟಗೆರೆಯಲ್ಲಿ 85.18 ರಷ್ಟು ಮತದಾನವಾಗಿದೆ.