ಮತದಾರರಿಗೆ ಆಮಿಷ: ಇಬ್ಬರ ವಿರುದ್ಧ ದೂರು
ಅರಕಲಗೂಡು: ಚುನಾವಣೆ ಮುನ್ನಾ ದಿನವಾದ ಬುಧವಾರ ರಾತ್ರಿ 11.30ರ ವೇಳೆ ಪೇಟೆ ಕುರುಬರ ಬೀದಿಯ ಸಮೀಪದಲ್ಲಿರುವ ಖಾಲಿ ಜಾಗದಲ್ಲಿ ಮದ್ಯವನ್ನು ಹಂಚುತ್ತಿದ್ದ ಆರೋಪದ ಮೇಲೆ ಗೋಪಾಲ ಎಂಬುವವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಅದೇ ರೀತಿ ಹೆಂಟಕೆರೆಕೊಪ್ಪಲು ಬಳಿ ಅಡಿಕೆ ಸುಲಿಯುವ ಕೇಂದ್ರದಲ್ಲಿ ಎಚ್.ಟಿ.ಮಂಜುನಾಥ ಎಂಬುವವರು ಬಾಡೂಟ ವಿತರಿಸುತ್ತಿದ್ದಾಗ ದಾಳಿ ನಡೆಸಿದ ಚುನಾವಣಾ ನೀತಿ ಸಂಹಿತೆ ಅನುಷ್ಠಾನಾಧಿಕಾರಿಗಳು ಮತ್ತು ಪೊಲೀಸರು ಸ್ಥಳದಲ್ಲಿ ದೊರೆತ ಅಡುಗೆ ಮಾಡಿದ ಪಾತ್ರೆ, ಊಟದ ಟೇಬಲ್ಲು, ಕುರ್ಚಿಗಳನ್ನು ವಶಪಡಿಸಿಕೊಂಡು ಮಂಜುನಾಥ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.