ಮನೆ ಬೀಗ ಮುರಿದು, ಚಿನ್ನ ಕಳವು
ಚನ್ನರಾಯಪಟ್ಟಣ: ಪಟ್ಟಣದ ನಾಗಸಮುದ್ರ ರಸ್ತೆಯಲ್ಲಿ ಕಳ್ಳರ ತಂಡ ಮನೆಯೊಂದರ ಬೀಗ ಮುರಿದು, ಮನೆಯಲ್ಲಿದ್ದ ಚಿನ್ನದ ಒಡವೆಗಳನ್ನು ಕಳವು ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ನಾಗಸಮುದ್ರ ರಸ್ತೆಯ ನಾಗರಾಜು ಎಂಬುವರ ಮನೆಯ ಬಾಗಿಲು ಮುರಿದ ಕಳ್ಳರು ಮನೆಯ ಕಪಾಟಿನಲ್ಲಿದ್ದ ಒಂದು ಜೊತೆ ಓಲೆ ಹಾಗೂ ಬೆಳ್ಳಿ ಒಡವೆಗಳನ್ನು ಕಳವು ಮಾಡಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಸೀಲಿಸಿದರು. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದು ಕೊಂಡಿದ್ದಾರೆ.
ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ
ಹೊಳೆನರಸೀಪುರ: ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ಪಟ್ಟಣದಲ್ಲಿನ ಕೋಟೆ ಶಾಖಾ ಮಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಮಾ.10ರಿಂದ ಮಾ.12ರವರೆಗೆ ನೀಲಕಂಠೇಶ್ವರ ರಥೋತ್ಸವ ಹಮ್ಮಿಕೊಳ್ಳಲಾಗಿದೆ.