ಮುಖಂಡರು ಕೆಜೆಪಿ ಸೇರ್ಪಡೆ
ಕ.ಪ್ರ. ವಾರ್ತೆ ಜಾವಗಲ್ ಮಾ. 7
ಯಡಿಯೂರಪ್ಪ ಅವರ ಕೆಜೆಪಿ ಪಕ್ಷ ಬೆಂಬಲಿಸುವಂತೆ ಬೇಲೂರು ತಾಲೂಕು ಕೆಜೆಪಿ ಮುಖಂಡ ಬಿ. ಶಿವರುದ್ರಪ್ಪ ತಿಳಿಸಿದರು. ಕೆಜೆಪಿ ಅಭಿಯಾನದಡಿ ಹೋಬಳಿಯ ಸಂಕೀಹಳ್ಳಿ ಗ್ರಾಮದಲ್ಲಿ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷ ತೊರೆದು ಕೆಜೆಪಿ ಸೇರಿದ ಸುಮಾರು 25ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಪಕ್ಷದ ಶಾಲು ಹೊದಿಸಿ ಕೆಜೆಪಿಗೆ ಬರಮಾಡಿ ಕೊಳ್ಳಲಾಯಿತು. ಯಗಚಿ ಏತ ನೀರಾವರಿ ಯೋಜನೆಗೆ ಯಡಿಯೂರಪ್ಪನವರ ನೇತೃತ್ವದ ಸರ್ಕಾರ 16 ಕೋಟಿ ಮಂಜೂರು ಮಾಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಮಾದಿಹಳ್ಳಿ ಮತ್ತು ಜಾವಗಲ್ ಹೋಬಳಿಯ 36 ಕೆರೆಗಳಿಗೆ ನೀರು ಹಾಯಿಸುವ ಕಾಮಗಾರಿ 2014ರ ಹೊತ್ತಿಗೆ ಪೂರಗೊಳ್ಳಲಿದೆ ಎಂಸಿದರು. ಸಂಕೀಹಳ್ಳಿಯ ರಾಜಶೇಖರ, ರವಿ ಸುರೇಶ, ಕುಮಾರ, ಪರಭು, ಸದಾಶಿವಪ್ಪ, ನಂಜುಡಪ್ಪ, ಗಂಗಾಧರಪ್ಪ, ಚಂದ್ರಪ್ಪ, ಪ್ರಕಾಶ, ಅಶೋಕ, ಹರೀಶ, ಲೋಕೇಶ, ಚಿಕ್ಕಣ ಕೆಜೆಪಿ ಪಕ್ಷ ಸೇರಿದರು.