ವಿವಾಹಿತ ವ್ಯಕ್ತಿ ಆತ್ಮಹತ್ಯೆಗೆ ಶರಣು
ಕ.ಪ್ರ. ವಾರ್ತೆ ಪಾವಗಡ ಮಾ. 7
ಹೊರವಲಯದ ತೋಪಿನಲ್ಲಿ ಬೇವಿನ ಮರವೊಂದಕ್ಕೆ ವಿವಾಹಿತ ವ್ಯಕ್ತಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ರಾತ್ರಿ ಪಟ್ಟಣದ ವೇಬ್ರಿಡ್ಜ್ ಬಳಿ ನಡೆದಿದೆ. ನೇಣಿಗೆ ಶರಣಾದ ವ್ಯಕ್ತಿ ಸತ್ಯಪ್ಪ ಅಲಿಯಾಸ್ ಸತ್ಯನಾರಾಯಣ (40) ಎಂದು ಗುರುತಿಸಲಾಗಿದೆ. ಆಂಧ್ರದ ಮಲ್ಲಾಪುರಂ ವಾಸಿಯಾದ ವಿವಾಹಿತ ಸತ್ಯಪ್ಪ ಅನೇಕ ವರ್ಷಗಳಿಂದ ಪಟ್ಟಣದ ಗುತ್ತಿಗೆದಾರೊಬ್ಬರ ಬಳಿ ಬೋರ್ವೆಲ್ಗಳ ರಿಗ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಕಳೆದ ಬುಧವಾರ ಪಟ್ಟಣದ ಹೊರವಲಯದಲ್ಲಿರುವ ತೋಪೊಂದರಲ್ಲಿ ಬೇವಿನ ಮರಕ್ಕೆ ನೇಣು ಬೀಗಿದುಕೊಂಡು ಸಾವನ್ನಪ್ಪಿದ್ದಾನೆ. ಈತನ ಸಾವು ಅನೇಕ ಸಂಶಯಗಳಿಗೆ ಎಡೆಮಾಡಿದ್ದು ನಿಖರವಾದ ಮಾಹಿತಿ ತಿಳಿದಿಲ.್ಲ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.