ಹೊನ್ನೇನಹಳ್ಳಿಯಲ್ಲಿ ಎನ್ಎಸ್ಎಸ್ ಶಿಬಿರ
ತುಮಕೂರು: ದಂಡಿನಶಿವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಹೊನ್ನೇನಹಳ್ಳಿಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರೊ. ಎನ್.ಪಿ. ಶಿವಾನಂದಯ್ಯ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯೋದ್ದೇಶಗಳನ್ನು ತಿಳಿಸಿದರು. ಗ್ರಾಪಂ ಸದಸ್ಯ ಹೆಚ್.ಎನ್. ಪುಟ್ಟಲಿಂಗಯ್ಯ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ನಡತೆ ರೂಪಿಸಿಕೊಳ್ಳುವಂತೆ ಕರೆ ನೀಡಿದರು. ಮತ್ತೊಬ್ಬ ಗ್ರಾಪಂ ಸದಸ್ಯ ಕೃಷಮೂರ್ತಿ ಮಾತನಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ಹೆಚ್.ಆರ್. ಆನಂದರಾವ್ ವಹಿಸಿದ್ದರು. ಕಾವ್ಯ ಪ್ರಾರ್ಥಿಸಿ, ಎನ್ಎಸ್ಎಸ್ ಅಧಿಕಾರಿ ಕೆ.ಎಸ್. ಮಲ್ಲಿಕಾರ್ಜುನ ಪ್ರಭು ನಿರೂಪಿಸಿ, ಪ್ರೊ. ವಿಶ್ವನಾಥ್ ಹೊನ್ನೇನಹಳ್ಳಿ ಸ್ವಾಗತಿಸಿ, ಪ್ರೊ.ಬಿ.ಎ. ಅಶ್ವಾಖ್ ಅಹಮದ್ ವಂದಿಸಿದರು. ಹೊನ್ನೇನಹಳ್ಳಿ ಗ್ರಾಮಸ್ಥರು, ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.