ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಿಲ್ಲಾಸ್ಪತ್ರೆಗೂ ನಿರಂತರ ವಿದ್ಯುತ್

Rashmi Kasaragodu
Updated On : 9 Mar 2013, 12:05 pm

ಕ.ಪ್ರ ವಾರ್ತೆ  ತುಮಕೂರು  ಮಾ.8
ಈಗಾಗಲೇ ಕೋರ್ಟ್, ಜಿಲ್ಲಾಧಿಕಾರಿಗಳ ಕಚೇರಿಗೆ ನಿರಂತರ ವಿದ್ಯುತ್ ಪೂರೈಸುತ್ತಿರುವ ಬೆಸ್ಕಾಂ ಈಗ ಜಿಲ್ಲಾಸ್ಪತ್ರೆಗೂ ನಿರಂತರ ವಿದ್ಯುತ್ ನೀಡಲು ನಿರ್ಧರಿಸಿದೆ.
ನಿರಂತರ ವಿದ್ಯುತ್ ಪೂರೈಸುವ ಸಲುವಾಗಿ 20 ಕೋಟಿ ರು. ಗಳನ್ನು ಖರ್ಚು ಮಾಡಲು ಬೆಸ್ಕಾಂ ನಿರ್ಧರಿಸಿದೆ. ಇದಲ್ಲದೇ ಜಿಲ್ಲಾ ಆಸ್ಪತ್ರೆ ಹಾಗೂ ಬೆಸ್ಕಾಂ ಜಂಟಿಯಾಗಿ ಬೆಸ್ಕಾಂ ನೌಕರರಿಗೆ ಆರೋಗ್ಯ ಶಿಬಿರ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಬೆಸ್ಕಾಂ ತುಮಕೂರು ವಿಭಾಗದ ಎಇಇ ನಟರಾಜ್ ಮಾಹಿತಿ ನೀಡಿದರು.
ಬೆಸ್ಕಾಂ ಕಚೇರಿ ಆವರಣದಲ್ಲಿರುವ ಶಕ್ತಿ ಗಣಪತಿ ಸಮುದಾಯಭವನದಲ್ಲಿ ಬೆಸ್ಕಾಂ ಮಹಿಳಾ ನೌಕರರು ಹಾಗೂ ದೂರು ನಿವಾರಣಾ ಸಮಿತಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದರು.
ಸಮಾಜದಲ್ಲಿ ಏನಾದರೂ ಕ್ರಾಂತಿಯಾಗುವುದಿದ್ದರೆ ಅದು ಹೆಣ್ಣು ಮಕ್ಕಳಿಂದ ಮಾತ್ರ. ಮಹಿಳೆಯರ ಮೇಲೆ ರಾತ್ರಿ ವೇಳೆ ಅದರಲ್ಲಿಯೂ ವಿದ್ಯುತ್ ಕೈಕೊಟ್ಟಾಗ ನಡೆಯುವ ದೌರ್ಜನ್ಯಗಳನ್ನು ತಡೆಯುವ ಉದ್ದೇಶದಿಂದ ನಿರಂತರ ವಿದ್ಯುತ್  ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ. ಎಂ. ರಜನಿ ಮಾತನಾಡಿ
ಮಹಿಳಾ ದೌರ್ಜ ನ್ಯವೆಂಬುದು ಸರ್ವ ವ್ಯಾಪ್ತಿಯಾಗಿದ್ದು, ಮನೆಯ ಒಳಗೆ ಮತ್ತು ಹೊರಗೆ ನಡೆಯುವ ಇಂತಹ ಕೃತ್ಯಗಳನ್ನು ನಾವು ಪ್ರತಿಭಟಿಸುವುದನ್ನು ಕಲಿಯಬೇಕಾಗಿದೆ ಎಂದು ತಿಳಿಸಿದ್ದಾರೆ.
ಮಹಿಳೆಯರು ಹೊಗಳಿದಾಗ ಉಬ್ಬುವುದು, ತೆಗಳಿದಾಗ ಕೆರಳುವ ದ್ವಂದ್ವ ನಿಲುವನ್ನು ಬಿಟ್ಟು ಹೊಗಳಿಕೆಯನ್ನು ಮಹಿಳಾ ದೌರ್ಜನ್ಯವೆಂದು ಪರಿಗಣಿಸಿ ಅಂತಹ ಮಾತುಗಳಿಗೆ ಕಡಿವಾಣ ಹಾಕುವ ಮೂಲಕ ಮುಂದೆ ಒದಗಬಹುದಾದ ದೊಡ್‌ಡ ಅನಾಹುತದ ಬಗ್ಗೆ ಎತ್ತೆಚ್ಚುಕೊಳ್ಳಬೇಕೆಂದರು.
ನಾನು ಕಳೆದ ಒಂದುವರೆ ವರ್ಷದಿಂದ ಜಿಲ್ಲಾ ಲೈಂಗಿಕ ದೌರ್ಜನ್ಯ ದೂರು ನಿರ್ವಹಣಾ ಸಮಿತಿಯ ಅಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದು,ಇದುವರೆಗೂ ನಾಲ್ಕು ಲೈಂಗಿಕ ದೌರ್ಜನ್ಯ ಪ್ರಕರಣಗಳು ಬಂದಿವೆ. ದುರಾದೃಷ್ಟವಶಾತ್ ನಾಲ್ಕು ಕೇಸುಗಳು ದುರುದ್ದೇಶದಿಂದ ಕೂಡಿದ್ದು, ಯಾವುದೇ ಲೈಂಗಿಕ ದೌಜನ್ಯಗಳು ನಡೆದಿರಲಿಲ್ಲ. ಆ ನಂತರದಲ್ಲಿ ಇದುವರೆಗೂ ಒಂದು ಕೇಸು ಸಹ ದಾಖಲಾಗಿಲ್ಲ ಎಂದು ತಿಳಿಸಿದರು.
ಉದ್ಯೋಗಸ್ಥ ಮಹಿಳೆ ಇಂದು ಮನೆಯ ಒಳಗೆ ಮತ್ತು ಹೊರಗೆ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾಳೆ. ಮನೆಯಲ್ಲಿ ಮಕ್ಕಳ ಗಂಡ,ಅತ್ತೆ ಮಾಮ ಸಂಬಂಧಿಕರ ಸೇವೆ ಮಾಡಿ ಕಚೇರಿಗೆ ಹೋಗಿ ಅಲ್ಲಿಯೂ ಬಿಡುವಿಲ್ಲದ ಕೆಲಸ ಮಾಡುವುದರಿಂದ ಒತ್ತಡಕ್ಕೆ ಸಿಲುಕಿ ಬಹುಬೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾಳೆ.ಇಂತಹ ಯಾಂತ್ರಿಕ ಜೀವನ ಕಡಿಮೆಯಾದರೆ ಮಾತ್ರ ಆಕೆ ಹೆಚ್ಚು ದಿನ ನೆಮ್ಮದಿಯಿಂದ ಬದುಕುಲು ಸಾಧ್ಯ. ಈ ನಿಟ್ಟಿನಲ್ಲಿ ಗಂಡಸರು ಅದರಲ್ಲಿಯೂ ಉದ್ಯೋಗಕ್ಕೆ ಹೋಗುವಂತಹ ಮಹಿಳೆಯ ಕುಟುಂಬದ ಸದಸ್ಯರು ಆಲೋಚಿಸಬೇಕಾಗಿದೆ ಎಂದರು.
ಮಹಿಳೆಯರು ಎಲ್ಲಾ ರೀತಿಯಿಂದಲೂ ಸಮಾನತೆ ಸಾಧಿಸಬೇಕಾಗಿದೆ. ದೇಶದ ಅರ್ಥಿಕ ಉತ್ಪನ್ನಕೆ ಹೆಚ್ಚಿನ ಕೊಡುಗೆ ನೀಡುವಂತಹ ಹುದ್ದೆಗಳನ್ನು ಮಹಿಳೆಯರು ಅಲಂಕರಿಸಬೇಕಾಗಿದೆ. ಕೇವಲ ಕ್ಲರಿಕಲ್, ನರ್ಸ್, ಡಾಕ್ಟರ್ ಇನ್ನಿತರ ಸಣ್ಣಪುಟ್ಟ ಹುದ್ದೆಗಳಿಗಿಂತ ದೊಡ್‌ಡ ಕಂಪನಿಗಳ ಸಿಇಓ, ಉದ್ಯಮಿಯಾಗಿ ಅರ್ಥಿಕವಾಗಿ ಸದೃಢರಾಗಬೇಕಾಗಿದೆ ಎಂದು ಡಾ.ರಜನಿ ತಿಳಿಸಿದರು.
ಶಿಕ್ಷಕಿ ಉಷಾ ನಟರಾಜ್ ಮಾತನಾಡಿ,ಮಹಿಳಾ ಕ್ಷೇತ್ರ ಇಂದು ವಿಶಾಲವಾಗಿ ಬೆಳೆದಿದೆ. ಆದರೂ ಸಹ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸಮರ್ಥವಾಗಿ ತಡೆಯಲು ಸಾಧ್ಯವಾಗಿಲ್ಲ. ಮಹಿಳಾ ದೌರ್ಜನ್ಯಗಳಿಗೆ ತಡೆಯೊಡ್‌ಡಬೇಕಾದರೆ ಚಿಕ್ಕಂದಿನಲ್ಲಿಯೇ ಮಕ್ಕಳ ನಡುವೆ ಗಂಡು, ಹೆಣ್ಣು ಎಂಬ ಭೇಧಭಾವವಿಲ್ಲದೆ ಬೆಳೆಸಬೇಕು. ಹೆಣ್ಣು ಮಕ್ಕಳು ಸಾಧನೆ ಮಾಡಲು ಹೊರಟಾಗ ಅವರನ್ನು ಪ್ರೋತ್ಸಾಹಿಸುವ ಮೂಲಕ ಅವರು ಸಹ ಸಮಾಜದಲ್ಲಿ ಗಣ್ಯವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಸಹಕಾರಿಯಾಗಬೇಕೆಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಬೆಸ್ಕಾಂನ ದೂರು ನಿರ್ವಹಣಾ ಸಮಿತಿಯ ಅಧ್ಯಕ್ಷೆ ಜ್ವಾಲಮಾಲ, ಜಿಲ್ಲಾ ಉಸ್ತುವಾರಿ ಸಚಿವರ ಪತ್ನಿ ನಾಗರತ್ನ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಡಾ.ರಜಿನಿ, ಬೆಸ್ಕಾಂ ನೌಕರರಾದ ಲಕ್ಷ್ಮಮ್ಮ,ಉಷಾ ನಟರಾಜ್  ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಡಾ.ರಜಿನಿ,ನಾಗರತ್ನ ಶಿವಣ್ಣ ಹಾಗೂ ಎಇಇ ನಟರಾಜ್ ಬಹುಮಾನ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement