ಎಲ್ಜಿ ಲಾರಿ ಮಾಲೀಕರು ಗೊತ್ತಿಲ್ಲ
ಕ.ಪ್ರ.ವಾರ್ತೆ ್ಣ ತುಮಕೂರು ್ಣ ಮಾರ್ಚ್ 9
ತುಮಕೂರು ಜಿಲ್ಲೆಯಿಂದ ಅಕ್ರಮವಾಗಿ ಮರಳುದಂಧೆ ನಡೆಸುತ್ತಿರುವ ಲಾರಿಗಳ ಹೆಸರು ಎಲ್ಜಿ. ಈ ಎಲ್ಜಿ ಲಾರಿಗಳ ಮಾಲೀಕರ ಹೆಸರು ತಮಗೆ ಗೊತ್ತಿಲ್ಲ. ಶೀಘ್ರದಲ್ಲೇ ಪತ್ತೆ ಹಚ್ಚಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಭರವಸೆ ನೀಡಿದರು.
ಈ ಅಕ್ರಮ ಮರಳು ದಂಧೆಯ ಲಾರಿಗಳನ್ನು ಅಧಿಕಾರಿಗಳು ಹಿಡಿದರೂ, ಒಂದು ದಿನ ಮೊದಲೇ ಪರ್ಮಿಟ್ ನೀಡಿರುವ ದಾಖಲೆಗಳನ್ನು ಸೃಷ್ಟಿಸಿ ನೀಡಲಾಗುತ್ತಿದೆ. ಇದರಿಂದ ಅಧಿಕಾರಿಗಳು ಕೂಡ ಯಾವುದೇ ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ. ಒಟ್ಟಾರೆ ಪರಿಸ್ಥಿತಿ ಅಯೋವುಯವಾಗಿದೆ.
ಮಾಮೂಲಿ ವಸೂಲಿ: ಈ ಅಕ್ರಮ ಮರಳು ದಂಧೆಯಲ್ಲಿ ಬೇಲಿಯೆ ಎದ್ದು ಹೊಲ ಮೇಯುತ್ತಿದೆ. ಜಿಲ್ಲಾಡಳಿತ, ಪೊಲೀಸರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳೆಲ್ಲಾ ಮಾಮೂಲಿ ವಸೂಲಿ ಮಾಡುತ್ತಿದ್ದಾರೆ. ಅಕ್ರಮ ಮರಳು ದಂಧೆಗೆ ಇವರೆಲ್ಲಾ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಸಚಿವರು ಆರೋಪಿಸಿದರು.
ಸಂಬಂಧವಿಲ್ಲ: ಈ ಅಕ್ರಮ ಮರಳು ದಂಧೆಯಲ್ಲಿ ವಿರೋಧ ಪಕ್ಷದ ಉಪನಾಯಕ ಟಿ.ಬಿ. ಜಯಚಂದ್ರ ಸೇರಿದಂತೆ ಯಾರೊಂದಿಗೂ ಅನೈತಿಕ ಸಂಬಂಧವಿಲ್ಲ. ಜಯಚಂದ್ರ ಹಾಗೂ ಅವರ ಕುಟುಂಬ ವರ್ಗ ಮೊದಲೂರು ಕೆರೆ ಅಕ್ರಮ ಮರಳು ದಂಧೆ ವಿಷಯದಲ್ಲಿ ಶಾಮೀಲಾಗಿರುವುದು ತಮಗೆ ಗೊತ್ತಿಲ್ಲ.
ಜಯಚಂದ್ರ ಸೇರಿದಂತೆ ಈ ಅಕ್ರಮ ಮರಳು ದಂಧೆಯಲ್ಲಿ ಪಾಲ್ಗೊಂಡ ಯಾರೊಂದಿಗೂ ತಾವು ಮೃದು ಧೋರಣೆ ಹೊಂದಿಲ್ಲ ಎಂದು ಸಚಿವ ಸೊಗಡು ಸ್ಪಷ್ಟಪಡಿಸಿದರು.