ಶಿವಲಿಂಗ, ಪೂರ್ಣಕುಂಭ ಮೆರವಣಿಗೆ
ಶಿರಾ: ವಿಶ್ವ ಹಿಂದೂ ಪರಿಷತ್, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾನಿಲಯ, ಅಖಿಲ ಭಾರತ ವೀರಶೈವ ಮಹಾ ಸಭಾ ಘಟಕ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯುಕ್ತಾಶ್ರಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶಿವಲಿಂಗ ಮತ್ತು ಪೂರ್ಣಕುಂಭ ಮೆರವಣಿಗೆ, ವಿಶೇಷ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾ. 10 ರಂದು ಏರ್ಪಡಿಸಲಾಗಿದೆ. ಪೂರ್ಣಕುಂಭ ಮೆರವಣಿಗೆಯನ್ನು ತಹಸೀಲ್ದಾರ್ ಟಿ.ಸಿ.ಕಾಂತರಾಜು ಚಾಲನೆ ನೀಡುವರು. ಅಧ್ಯಕ್ಷತೆಯನ್ನು ವಿಶ್ವಹಿಂದೂ ಪರಿಷತ್ ಶಿರಾ ಘಟಕದ ಆರ್.ವಿ. ಪುಟ್ಟಕಾಮಣ್ಣ ವಹಿಸುವರು. ಧರ್ಮಸ್ಥಳ ಯೋಜನೆಯ ನಿರ್ದೆಶಕ ಪಿ.ಕೆ.ಪುರುಷೋತ್ತಮ್, ಈಶ್ವರಿ ವಿಶ್ವವಿದ್ಯಾನಿಲಯದ ರಾಜಯೋಗಿ ಮಹೇಂದ್ರಕುಮಾರ್, ವಿಶೇಷ ಉಪನ್ಯಾಸ ನೀಡಲಿದ್ದು ಭಗವದ್ಗೀತೆ ಅಭಿಯಾನ ಸಮಿತಿ ಅಧ್ಯಕ್ಷ ಪ್ರೊ. ಕೆ.ಹನುಮಂತರಾಯಪ್ಪ, ಜಾನಪದ ವಿದ್ವಾಂಸ ಡಾ.ಚಿಕ್ಕಣ್ಣ ಯೆಣ್ಣೆಕಟ್ಟೆ, ರಂಗಕರ್ಮಿ ಡಾ.ಕೆ. ರಾಮಕೃಷ್ಣ ಮತ್ತಿತರರು ಹಾಜರಿರುವರು.
ಇಂದು ಭಸ್ಮಾಂಗಿ ಬೆಟ್ಟದಲ್ಲಿ ಪೂಜೆ
ತುಮಕೂರು: ಮಧುಗಿರಿ ತಾಲೂಕು ದೊಡ್‌ಡೇರಿ ಹೋಬಳಿ ಸಿಂಗರಾವುತನಹಳ್ಳಿಯ ಏಕಶಿಲಾ ಭಸ್ಮಾಂಗಿ ಬೆಟ್ಟದಲ್ಲಿ ಮಾ. 10 ರಂದು ಮಹಾಶಿವರಾತ್ರಿ ಪ್ರಯುಕ್ತ ರಾತ್ರಿ 8 ಗಂಟೆಯಿಂದ ಮಹಾರುದ್ರಾಭಿಷೇಕ, ಜಾಗರಣೆ, ಧಾರ್ಮಿಕ ಸಭೆ ಹಾಗೂ ವಿವಿಧ ಪೂಜೆ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.