ಗರ್ಭದಿಂದ ಗೋರಿಯವರೆಗೆ ಶೋಷಣೆ
ತುಮಕೂರು: ಗರ್ಭದಿಂದ ಗೋರಿಯವರೆಗೆ ಹೆಣ್ಣು ಮಕ್ಕಳ ಶೋಷಣೆಯಾಗುತ್ತಿದೆ ಎಂದು ಲೇಖಕಿ ಆರ್. ಸರೋಜ ಆತಂಕ ವ್ಯಕ್ತಪಡಿಸಿದರು. ಅವರು ಇಲ್ಲಿನ ಎಂಪ್ರೆಸ್ ಪ.ಪೂ. ಕಾಲೇಜಿನಲ್ಲಿ ಜಿಲ್ಲಾ ಲೇಖಕಿಯರ ಸಂಘದಿಂದ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಭ್ರೂಣ ಹತ್ಯೆಯಿಂದ ಹೆಣ್ಣು ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಲೇಖಕಿ ಸುಮತಿ ಕೃಷ್ಣರಾವ್ ಅವರು ಆರ್ಥಿಕ ಸ್ವಾವಲಂಬನೆಯಿಂದ ಹೆಣ್ಣು ಸಬಲಗೊಳ್ಳುತ್ತಾಳೆ ಎಂದರು. ಪ್ರಶಸ್ತಿ ಪುರಸ್ಕೃತ ಲೇಖಕಿ ಕಮಲ ಬಡ್ಡಿಹಳ್ಳಿ ಮಾತನಾಡಿ ಹೆಣ್ಣುನ್ನು ಸಂಬೋಧಿಸುವಾಗ ತಾಯಿ, ಅಕ್ಕ, ಮಗಳೆ ಎಂದು ಗೌರವಿಸುವ ಸಂಸ್ಕಾರವನ್ನು ಬೆಳೆಸಬೇಕು ಎಂದರು.