ಡಿವೈಡರ್ಗೆ ಡಿಕ್ಕಿ ಹೊಡೆದು ವಾಹನ ಪಲ್ಟಿ: ಸ್ಥಳದಲ್ಲೇ ಇಬ್ಬರ ಸಾವು
ಕ.ಪ್ರ. ವಾರ್ತೆ ್ಣ ಶಿರಾ ್ಣ ಮಾ.10
ಬೆಂಗಳೂರಿನಿಂದ ಚಳ್ಳೆಕರೆ ತಾಲೂಕಿನ ದೊಡ್ಡೇರಿ ಗ್ರಾಮದ ಸಮೀಪವಿರುವ ದತ್ತಾತ್ರೆಯ ಆಶ್ರಮಕ್ಕೆ ಅಂಧರನ್ನು ಕರೆದುಕೊಂಡು ಹೋಗುತ್ತಿದ್ದ ಮಹೇಂದ್ರ ಝೈಲೋ ಕಾರು ರಸ್ತೆ ಬದಿ ಇದ್ದ ಡಿವೈಡರ್ಗೆ ಡಿಕ್ಕಿ ಹೊಡೆದು ವಾಹನ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನಪ್ಪಿ 7 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿ ರಾ.ಹೆ.4 ದ್ವಾರಾಳುವಿನ ಬಳಿ ಭಾನುವಾರ ಮಧ್ಯಾಹ್ನ 2-30 ರ ಸುಮಾರಿಗೆ ನಡೆದಿದೆ.
ಮೃತ ದುರ್ದೈವಿಗಳು ಭಾಗಶಃ ಅಂಧರಾಗಿದ್ದು ಮರಿಯಣ್ಣ (26), ಮುದ್ದುರಾಜ್ (25) ಉಳಿದ 7 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಇವರೆಲ್ಲರೂ ಕುರುಡರಾಗಿದ್ದು ಅಂಧ ಶಾಲೆಯವರಾಗಿದ್ದಾರೆ. ಇವರನ್ನು ಸಮಾಜ ಸೇವಕಿ ರಾಧಿಕ ಎಂಬುವರು ದತ್ತಾತ್ರೆಯ ಆಶ್ರಮಕ್ಕೆ ಕರೆದುಕೊಂಡು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ತಾವರೆಕೆರೆ ಠಾಣಾಧಿಕಾರಿ ಪ್ರಶಾಂತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.