ದೇಣಿಗೆ ಹಣ ಸಿಪಿಐ ಪಕ್ಷಕ್ಕೆ ವಿನಿಯೋಗ
ಕ.ಪ್ರ.ವಾರ್ತೆ ್ಣ ತುಮಕೂರು ್ಣ ಮಾ.11
ತುಮಕೂರು ನಗರಸಭೆ ವಾರ್ಡ್ ನಂಬರ್ 1 ರ ಸಿಪಿಐ ಪಕ್ಷದ ಅಭ್ಯರ್ಥಿ ಓಟು ಕೊಡಿ ನೋಟು ಕೊಡಿ ಎಂಬ ಆಂದೋಲನದೊಂದಿಗೆ ಸಾರ್ವಜನಿಕರಿಂದ ಸಂಗ್ರಹಿಸಿದ್ದ ಹಣವನ್ನು ಪಕ್ಷದ ನಿಧಿಗೆ ದೇಣಿಗೆ ನೀಡಿದ್ದಾರೆ.
ವಾರ್ಡ್ ನಂಬರ್ 1 ರ ಸಿಪಿಐ ಪಕ್ಷದ ಅಭ್ಯರ್ಥಿ ಕಾಂ. ಗಿರೀಶ್ ಅವರು ಪಕ್ಷದ ಸಿದ್ಧಾಂತ ಮತ್ತು ತತ್ವವನ್ನು ಆಧರಿಸಿ ವಾರ್ಡ್ ನಂಬರ್ 1 ರ ಮತದಾರರನ್ನು ಪ್ರಜ್ಞಾವಂತ ಮತದಾರರನ್ನಾಗಿಸಿ ಓಟು ಕೊಡಿ ನೋಟು ಕೊಡಿ ಎಂಬ ಆಧಾರದಲ್ಲಿ ಪ್ರಚಾರ ಆರಂಭಿಸಿ ಮತದಾರರಿಂದ ಸಂಗ್ರಹವಾದ 4011 ರು.ಗಳನ್ನು ಸಾರ್ವಜನಿಕರ ಸಮ್ಮುಖದಲ್ಲಿ ಪಕ್ಷದ ಮುಖಂಡರಾದ ಅಶ್ವತ್ಥ ನಾರಾಯಣ್ ಮೂಲಕ ಪಕ್ಷಕ್ಕೆ ನೀಡಿದರು. ಪಕ್ಷದ ಮುಖಂಡರಾದ ಗೌಡ ರಂಗಪ್ಪ, ಎಂ.ಸಿ. ಮಂಜುನಾಥ್, ಉಮೇಶ್, ಅಖಿಲ ಭಾನು, ಯಶೋದ ಗಿರೀಶ್, ಶಂಕರ್, ರಂಗನಾಥ್, ಬಸಮ್ಮ, ಮಂಜುನಾಥ್, ಹನುಮಂತಪ್ಪ, ಮುರುಳಿ, ವೆಂಕಟಚಲಪ್ಪ, ಚಂದ್ರಶೇಖರ, ಪೂಜಣ್ಣ, ಗಿರೀಶ್ ಮುಂತಾದವರು ಭಾಗವಹಿಸಿದ್ದರು.