ಸೂಲಗಿತ್ತಿ ಕೆಲಸ ಜಾತಿ, ಮತಗಳ ಹಂಗು ಮೀರಿದ ಸೇವೆ: ಸಿಎಂ
ತುಮಕೂರು: ತುಮಕೂರು ಜಿಲ್ಲೆ ಪಾವಗಡದ ಸೂಲಗಿತ್ತಿ ನರಸಮ್ಮ ಅವರಿಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿದರು.
ಪ್ರಶಸ್ತಿ ವಿತರಿಸಿ ಮಾತನಾಡಿದ ಜಗದೀಶ್ ಶೆಟ್ಟರ್ ಅವರು ಸೂಲಗಿತ್ತಿ ಕೆಲಸ ಜಾತಿ, ಮತಗಳ ಹಂಗು ಮೀರಿದ ಸೇವೆ ಎಂದು ಪ್ರಶಂಸಿಸಿದರು. ಕಾರ್ಯಕ್ರಮದಲ್ಲಿ ಖ್ಯಾತ ಜಾನಪದ ಗಾಯಕಿ ಬುಗಡೂರು ಗಂಗಮ್ಮ, ಸಚಿವರಾದ ಕಳಕಪ್ಪ ಡಿ. ಬಂಡಿ, ವಿಧಾನ ಪರಿಷತ್ ಉಪಸಭಾಪತಿ ವಿಮಲಾಗೌಡ, ಶಾಸಕ ಹೇಮಚಂದ್ರ ಸಾಗರ್, ಸೀಮ ಅಶೋಕ್ ಮಸೂತಿ, ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಮೇಶ್ ಬಿ. ಝಳಕಿ ಹಾಜರಿದ್ದರು.