ಜೆಡಿಎಸ್ ಗೆಲವು: ವಿಜಯೋತ್ಸವ
ಕ.ಪ್ರ.ವಾರ್ತೆ ಬೇಲೂರು ಮಾ.11
ಪಟ್ಟಣ ಪುರಸಭೆಗೆ ನಡೆದ ಚುನಾವಣೆಯಲ್ಲಿ 12 ಸ್ಥಾನ ಗಳಿಸುವ ಮೂಲಕ ಜೆಡಿಎಸ್ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ. ಪುರಸಭೆಯ 23 ಸ್ಥಾನಗಳಲ್ಲಿ ಜೆಡಿಎಸ್ 12, ಕಾಂಗ್ರೆಸ್ 9, ಪಕ್ಷೇತರರು 2 ಸ್ಥಾನ ಗಳಿಸಿದ್ದಾರೆ. 12 ಸ್ಥಾನ ಗಳಿಸುವ ಮೂಲಕ ಜೆಡಿಎಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
2007ರ ಮೀಸಲಾತಿಯಂತೆ ನಡೆದ ಚುನಾವಣೆಯಲ್ಲಿ ಹಳಬರು ಮತ್ತೆ ತಮ್ಮ ಸಾಮರ್ಥ್ಯ ಪರೀಕ್ಷೆಗೆ ಮುಂದಾದರೂ ಕೇವಲ 3 ಮಂದಿ ಮಾತ್ರ ಮರು ಆಯ್ಕೆಗೊಂಡಿದ್ದಾರೆ. 6 ನೇ ವಾರ್ಡಿನಿಂದ ಪುರಸಭೆ ಮಾಜಿ ಅಧ್ಯಕ್ಷ ಜಿ.ಶಾಂತಕುಮಾರ್ ಕಳೆದ ಬಾರಿ ಜೆಡಿಎಸ್ನಿಂದ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಗೊಂಡಿದ್ದು, ಈ ಬಾರಿಯೂ ಅದೇ ವಾರ್ಡಿನಿಂದ ಗೆಲವು ಸಾಧಿಸಿದ್ದಾರೆ.
ಜೆಡಿಎಸ್ನಿಂದ 19 ನೇ ವಾರ್ಡ್ ಚನ್ನಕೇಶವ ಹಾಗೂ ಕಾಂಗ್ರೆಸ್ನಿಂದ 14 ವಾರ್ಡಿನ ಧರ್ಮೇಗೌಡ ಮರು ಆಯ್ಕೆ ಗೊಂಡಿದ್ದಾರೆ. ಈ ಬಾರಿ ಹೆಚ್ಚಾಗಿ ಹೊಸಬರು ಆಯ್ಕೆಯಾಗಿರುವುದು ವಿಶೇಷ.