ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜೆಡಿಎಸ್ ಪರ ಜನಾಭಿಪ್ರಾಯ: ಅಂಜಿನಪ್ಪ

Rashmi Kasaragodu
Updated On : 11 Mar 2013, 11:21 am

ಕ.ಪ್ರ. ವಾರ್ತೆ, ಪಾವಗಡ, ಮಾ.11
ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಪರ  ಜನಾಭಿಪ್ರಾಯ ಹೊರಬಿದ್ದಿದ್ದು, ಈ ಫಲಿತಾಂಶ ವಿಧಾನ ಸಭಾ ಚುನಾವಣೆಗೆ ಪೂರಕವಾಗಲಿದೆ ಎಂದು  ಜಿಪಂ ಸದಸ್ಯ ಆರ್.ಸಿ ಅಂಜಿನಪ್ಪ ತಿಳಿಸಿದರು.
ಸೋಮವಾರ ಪಟ್ಟಣದಲ್ಲ್ದಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಪುರಸಭೆ ಚುನಾವಣೆಯಲ್ಲಿ 23ಸ್ಥಾನಗಳ ಪೈಕಿ 11ಸ್ಥಾನಗಳು ಜೆಡಿಎಸ್ ಪಾಲಾಗಿವೆ ಎಂದರು.
ಜನ್ನಾಭಿಪ್ರಾಯ ಜೆಡಿಎಸ್ ಪರ ಇದೆ ಎಂದ ಅವರು ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಮುಖಂಡ ಎ.ಶಂಕರರೆಡ್ಡಿ ಹಾಗೂ ಇನ್ನಿತರ ಮುಖಂಡರ ಸೇವೆಯ ಹಿನ್ನೆಲೆಯಲ್ಲಿ ಪುರಸಭೆಯಲ್ಲಿ ಹೆಚ್ಚು ಸ್ಥಾನಗಳು ಬರಲು ಸಾಧ್ಯವಾಯಿತು ಎಂದರು. ಪಕ್ಷೇತರ ಅಭ್ಯರ್ಥಿಗಳ ಬೆಂಬಲದಿಂದ ಪುರಸಭೆ ಜೆಡಿಎಸ್ ಆಡಳಿತವಾಗಲಿದ್ದು ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಜೆಡಿಎಸ್ ಅಧಿಕಾರದಲ್ಲಿರಲಿ ಅಥವಾ ಇಲ್ಲದಿರಲಿ ಹೋರಾಟ ನಿರಂತರವಾಗಿರುತ್ತದೆ ಎಂದರು.
ಮಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ ಮಾತನಾಡಿ ಪುರಸಭಾ ಚುನಾವಣೆ ಗೆಲವು ಜೆಡಿಎಸ್ ಪಕ್ಷದ ಗೆಲುವಲ್ಲ ಜನತೆಯ ಗೆಲವು ಎಂದರು.
ಪಕ್ಷದ ಅಧ್ಯಕ್ಷ ಎನ್.ತಿಮ್ಮಾರೆಡ್ಡಿ, ಎಸ್.ಕೆ.ರೆಡ್ಡಿ,ಪ್ರಧಾನ ಕಾರ್ಯದರ್ಶಿ ಗೋವಿಂದಬಾಬು, ವೆಂಕಟರಾಮರೆಡ್ಡಿ ಎ.ಶಂಕರರೆಡ್ಡಿ, ಕೆ.ಆರ್.ಸುರೇಶ್ ಮುಂತಾದವರು ಫಲಿತಾಂಶದ ಬಗ್ಗೆ ಹರ್ಷ ವ್ಯಕ್ತಪಡಿಸಿ ಮುಂದಿನ ಶಾಸಕ ಕೆ.ಎಂ. ತಿಮ್ಮರಾಯಪ್ಪ ಆಗುವುದು ಶತಃಸಿದ್ಧ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಬೆಟ್ಟದ ಈರಣ್ಣ ಜಿಪಂ ಸದಸ್ಯ ಅಂಜನೇಯಲು, ನ್ಯಾಯಬೆಲೆ ಅಂಗಡಿ ಮಾಲೀಕ ಪ್ರಕಾಶ್, ಎನ್.ಇ.ಈರಣ್ಣ ನೂತನ ಸದಸ್ಯರಾದ ಮನುಮಹೇಶ್ ಜಿ.ಎ. ವೆಂಕಟೇಶ್, ಗುಟ್ಟಹಳ್ಳಿ ಮಣಿ  ಮುಂತಾದವರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement