ಹೆಚ್ಚುವರಿ ಶಾಲಾ ಕಟ್ಟಡದ ಉದ್ಘಾಟನೆ
ತಿಪಟೂರು: ತಾಲ್ಲೂಕಿನ ಸಾರ್ಥವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಮ್ಮೂರ ಶಾಲಾ ಹಬ್ಬ ಹಾಗೂ ಹೆಚ್ಚುವರಿ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಶಾಸಕ ಬಿ.ಸಿ. ನಾಗೇಶ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಎಸ್.ಹೆಚ್. ರಘುಕುಮಾರ್ ವಹಿಸಿದ್ದರು. ಸಮಾರಂಭದಲ್ಲಿ ಬಿಇಓ ಮನಮೋಹನ್, ಶಿಕ್ಷಣ ಸಂಯೋಜಕ ಬ.ನ. ಬಸವರಾಜು, ಜಿ.ಪಂ. ಸದಸ್ಯ ನಾಗರಾಜು, ತಾ.ಪಂ. ಸದಸ್ಯೆ ವಸಂತಗಂಗಾಧರ್, ಗ್ರಾ.ಪಂ.ಅಧ್ಯಕ್ಷೆ ಈರಮ್ಮ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಉಪಾಧ್ಯಕ್ಷ ಜಿ.ಆರ್. ಜಯರಾಂ ಸೇರಿದಂತೆ ಗ್ರಾ.ಪಂ.ಸದಸ್ಯ ಮತ್ತು ಶಾಲಾ ಸಿಬ್ಬಂದಿ ವರ್ಗದವರಿದ್ದರು. ಮುಖ್ಯ ಶಿಕ್ಷಕ ಕೆ.ನಾಗರಾಜು ಸ್ವಾಗತಿಸಿ, ಹೆಚ್.ಎಲ್. ಸತ್ಯನಾರಾಯಣ್ ನಿರೂಪಿಸಿ, ಸಹ ಶಿಕ್ಷಕ ಅಡವೀರಪ್ಪ ವಂದಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.