ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಎಲ್‌ಐಸಿ ವಿಶ್ವದಲ್ಲೇ ನಂ.1 ಮಾಡಲು ಶ್ರಮ

Mainashree
Updated On : 13 Mar 2013, 12:09 pm

ಕ.ಪ್ರ. ವಾರ್ತೆ ್ಣ ಕುಣಿಗಲ್ ್ಣ ಮಾ.12
ರಾಷ್ಟ್ರದಲ್ಲಿ ಕೋಟ್ಯಂತರ ಮಂದಿಯ ನಂಬಿಕೆಯನ್ನು ಉಳಿಸಿಕೊಂಡು, ಪಾಲಿಸಿದಾರರ ದುಮ್ಮಾನಗಳಿಗೆ ಯಾವುದೇ ದೂರುಗಳಿಗೆ ಆಸ್ಪದವಿಲ್ಲದಂತೆ ಸ್ಪಂದಿಸುತ್ತಿರುವ ಭಾರತೀಯ ಜೀವ ವಿಮಾ ನಿಗಮವನ್ನು ವಿಮಾ ವಲಯದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನಕ್ಕೆ ತರುವ ದಿಸೆಯಲ್ಲಿ ನಿಗಮದ ಎಲ್ಲಾ ಹಂತದ ಸಿಬ್ಬಂದಿ, ಪ್ರತಿನಿಧಿಗಳು ಶ್ರಮಿಸುವಂತೆ ಎಲ್‌ಐಸಿ ಕೇಂದ್ರ ಕಚೇರಿ ್ಯವಸ್ಥಾಪಕ ನಿರ್ದೇಶಕ ಟಿ.ಥಾಮಸ್ ಮ್ಯಾಥ್ಯೂ ಕಿವಿಮಾತು ಹೇಳಿದ್ದಾರೆ.
ಪಟ್ಟಣದ ಬೇಗೂರು ಗೇಚ್ ಸಮೀಪದ ಹಳೇ ರಾಷ್ಟ್ರೀಯ ಹೆದ್ದಾರಿ 48ರ ಬದಿಯಲ್ಲಿ, ನಿರ್ಮಿಸಲಾಗಿರುವ ನೂತನ ಜೀವ ವಿಮಾ ಕಚೇರಿ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.  ಕಾಲಕ್ಕೆ ತಕ್ಕಂತೆ ಪಾಲಿಸಿದಾರರಿಗೆ ಉತ್ತಮ ಸೇವೆ ನೀಡುವ ದಿಸೆಯಲ್ಲಿ ನಿಗಮವು ಅತ್ಯುತ್ತಮ ತಂತ್ರಜ್ಞಾನ ಅಳವಡಿಸಿಕೊಂಡು, ತ್ವರಿತ ಗತಿಯ ಸೇವೆ ನೀಡುತ್ತಾ, ಗ್ರಾಹಕರ ನಂಬಿಕೆಗೆ ಪಾತ್ರವಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ವಿಮೆ ಹೊಂದುವ ನಿಟ್ಟಿನಲ್ಲಿ ನಿಗಮದ ಪ್ರತಿನಿಧಿಗಳು ಶ್ರಮಿಸುವ ಮೂಲಕ ನಿಗಮವು ವಿಶ್ವದ ವಿಮಾ ಕ್ಷೇತ್ರದಲ್ಲಿ  ಮೊದಲ ಸ್ಥಾನಕ್ಕೆರುವ ನಿಟ್ಟಿನಲ್ಲಿ ಶ್ರಮಿಸಬೇಕೆಂದರು.
ವಲಯ ಪ್ರಧಾನ ವ್ಯವಸ್ಥಾಪಕ ಎ.ಕೆ.ಸಾಹು ಮಾತನಾಡಿ, ಭಾರತೀಯ ಜೀವ ವಿಮಾ ನಿಗಮ ಸಮಾಜದ ಎಲ್ಲಾ ಸ್ತರದ, ಎಲ್ಲಾ ವರ್ಗದ ಜನತೆಯ ಅನುಕೂಲಕ್ಕಾಗಿ ವಿವಿಧ ವಿಮಾ ಸೌಲಭ್ಯ ಜಾರಿಗೆ ತಂದಿದ್ದು, ಪ್ರತಿನಿಧಿಗಳು ಇವುಗಳ ಬಗ್ಗೆ ಅರಿವು ಮೂಡಿಸಿ ನಿಗಮದ ಯೋಜನೆ, ವಿಮಾ ಸೌಲಭ್ಯ ಜನತೆ ಮುಟ್ಟುವ ದಿಸೆಯಲ್ಲಿ ಶ್ರಮಿಸಬೇಕೆಂದರಲ್ಲದೆ, ನಿಗಮ ಹೊಸದಾಗಿ ಜಾರಿಗೆ ತಂದಿರುವ ಜೀವನ್ ಸುಗಮ್ ವಿಮೆ ಮತ್ತಷ್ಟು ಜನತೆಗೆ ತಲುಪುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದರು.
ರಾಜ್ಯವಲಯದ ಮಾರುಕಟ್ಟೆ ಪ್ರಾದೇಶಿಕ ವ್ಯವಸ್ಥಾಪಕ ಸಿ.ವಿಕಾಸರಾವ್ ಮಾತನಾಡಿ, ಬಹುತೇಕ ಜನಸಾಮಾನ್ಯರು ಬ್ಯಾಂಕುಗಳಲ್ಲಿ ಹುಂಡಿ ಹಣ ಇಟ್ಟಿದ್ದು, ಇಂತಹ ಹಣವನ್ನು ವಿಮಾ ವಲಯಕ್ಕೆ ಹೂಡುವತ್ತಾ ಗ್ರಾಹಕರಿಗೆ ಅರಿವು ಮೂಡಿಸುವ ಜೊತೆಯಲ್ಲಿ, ಈ  ಸಂಬಂಧ ಅಂತಹ ಹಣಕ್ಕೆ ದೊರೆಯುವ ಹಲವು ಅದ್ಭುತ ಸೌಲಭ್ಯಗಳ ಬಗ್ಗೆ ಜಾಗೃತಿಗೊಳಿಸಬೇಕೆಂದರು.
ಬೆಂಗಳೂರು ವಿಭಾಗದ ಹಿರಿಯ ವಿಭಾಗಾಧಿಕಾರಿ ಪಿ.ಕುಮರೇಸನ್, ಮಾರಾಟ ವ್ಯವಸ್ಥಾಪಕ ಪ್ರಕಾಶ್, ದಾಸ್, ಹಿರಿಯ ಶಾಖಾಧಿಕಾರಿಗಳಾದ ಸದಾಶಿವಶೆಟ್ಟಿ, ಸ್ಥಳೀಯ ಅಧಿಕಾರಿಗಳಾದ ವಿಜಯಶ್ರೀ, ಪ್ರಕಾಶ್, ಆನಂದಮೂರ್ತಿ, ಸದಾಶಿವ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement