ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜೆಡಿಎಸ್‌ಗೆ ತುರುವೇಕೆರೆ ಪಪಂ ಚುಕ್ಕಾಣಿ: ಕೃಷ್ಣಪ್ಪ

Mainashree
Updated On : 13 Mar 2013, 12:09 pm

ಕ.ಪ್ರ. ವಾರ್ತೆ ್ಣ ತುರುವೇಕೆರೆ ್ಣ ಮಾ.12
ಪಟ್ಟಣ ಪಂಚಾಯ್ತಿ ಅಧಿಕಾರದ ಚುಕ್ಕಾಣಿ ಜೆಡಿಎಸ್ ಹಿಡಿಯುವುದು ಖಚಿತ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಪಟ್ಟಣ ಪಂಚಾಯ್ತಿ 14 ಸ್ಥಾನಗಳ ಪೈಕಿ ಜೆಡಿಎಸ್ 7ಸ್ಥಾನ ಗಳಿಸಿದೆ. ಅಗತ್ಯವಿರುವ ಮತ್ತೊಂದು ಮತವನ್ನು ತಾವು ಚಲಾಯಿಸುವುದರಿಂದ ಅಧಿಕಾರದ ಚುಕ್ಕಾಣಿ ತಮ್ಮ ಪಕ್ಷದ್ದಾಗಲಿದೆ ಎಂದು ಹೇಳಿದರು.
ಜೆಡಿಎಸ್ ಸೋಲಿಸಬೇಕು ಎಂಬ ದುರಾಲೋಚನೆಯಿಂದ ಕಾಂಗ್ರೆಸ್ ಮತ್ತು ಕೆಜಿಪಿ ಇಲ್ಲದ ಕಸರತ್ತು ನಡೆಸಿ, ರಾಜಕೀಯ ವ್ಯಭಿಚಾರ ಮಾಡಿದವು.ಆದರೆ ಮತದಾರರು ತಾವು ಪಟ್ಟಣಕ್ಕೆ ಮಾಡಿರುವ ಅಭಿವೃದ್ಧಿ ಕಾರ್ಯ ಗಮನಿಸಿ ಏಕ ಪ್ರಕಾರವಾಗಿ ಹೋರಾಡಿದ ತಮ್ಮನ್ನು ಬೆಂಬಲಿಸಿದರು ಎಂದು ಕೃಷ್ಣಪ್ಪ ಹೇಳಿದರು. ಸ್ಥಳೀಯ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಕೆಜೆಪಿ ಮತದಾರರನ್ನು ತಪ್ಪುದಾರಿಗೆ ಎಳೆಯಿತು. ಮತದಾರರಿಗೆ ಹಣ, ಹೆಂಡದ ಹಾಗೂ ಇತರ ವಸ್ತುಗಳ ಆಮಿಷ ಒಡ್ಡಿ ಮತದಾನದ ವ್ಯವಸ್ಥೆಯನ್ನೇ ಬುಡಮೇಲು ಮಾಡಿತು ಎಂದು ಆರೋಪಿಸಿದರು. ಆಮಿಷದಿಂದಲೇ 3 ಸ್ಥಾನ ಗಳಿಸಿದ  ಕೆಜೆಪಿ ಪ್ರಾಮಾಣಿಕವಾಗಿ ಹೋರಾಡಿದ್ದರೆ ಒಂದು ಸ್ಥಾನವೂ ಲಭಿಸುತ್ತಿರಲಿಲ್ಲ ಎಂದು ಲೇವಡಿ ಮಾಡಿದರು. ತಮ್ಮ ನಿರೀಕ್ಷೆಯಂತೆ ಇನ್ನೂ 4 ಸ್ಥಾನಗಳು ಜೆ ಡಿ ಎಸ್ ಗೆ ಲಭಿಸಬೇಕಿತ್ತು.
ಆದರೆ ತಾವು ಟಿಕೆಟ್ ನೀಡುವಲ್ಲಿ ಕೈಗೊಂಡ ತೀರ್ಮಾನ ತಪ್ಪಾಗಿದ್ದರಿಂದ ಗೆಲುವು ಕೈ ತಪ್ಪಿತು ಎಂದು ಒಪ್ಪಿಕೊಂಡ ಶಾಸಕ ಎಂ.ಟಿ.ಕೃಷ್ಣಪ್ಪ ಆತ್ಮವಿಮರ್ಶೆ ಮಾಡಿಕೊಂಡು ಸೋಲಿನ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement