ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶಿರಾ ಸಮಗ್ರ ಅಭಿವೃದ್ಧಿಗೆ ಒತ್ತು: ಶಾಸಕ ಜಯಚಂದ್ರ

Mainashree
Updated On : 13 Mar 2013, 12:08 pm

ಕ.ಪ್ರ. ವಾರ್ತೆ ್ಣ ಶಿರಾ ್ಣ ಮಾ.12
ಈ ಬಾರಿ ಶಿರಾದಲ್ಲಿ ಜನತೆ ಅಭಿಲಾಷೆಯಿಂದ ಕಾಂಗ್ರೆಸ್‌ಗೆ ಬಹುಮತ ದೊರೆತಿದ್ದು, ಈ ನಿಟ್ಟಿನಲ್ಲಿ ಅಧಿಕಾರಕ್ಕೆ ತರಲು ಶ್ರಮಿಸಿದ ಮತದಾರರು ಮತ್ತು ಪಕ್ಷದ ಮುಖಂಡರು ಶಾಸಕ ಟಿ.ಬಿ.ಜಯಚಂದ್ರ ಅಭಿನಂದನೆ ಸಲ್ಲಿಸಿದರು.
ಈ ಸಂಬಂಧವ ಶಾಸಕರು ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿ, ಶಿರಾ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 15 ಸ್ಥಾನ ಲಭಿಸಿದ್ದು, ಈ ನಿಟ್ಟಿನಲ್ಲಿ ಆಡಳಿತ ನಡೆಸುವ ಕಾಂಗ್ರೆಸ್ ಅಭಿವೃದ್ಧಿ ಕಾರ್ಯ ಹಮ್ಮಿಕೊಳ್ಳಲಿದೆ.  
ಪಕ್ಷೇತರರ ಬೆಂಬಲ: ಪಕ್ಷೇತರರಾಗಿ ಗೆದ್ದಿರುವ 5 ಜನ ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ. ಅವರೆಲ್ಲರೂ ಬೇಷರತ್ ಆಗಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.
ಈ ನಿಟ್ಟಿನಲ್ಲಿ ಕಾಂಗ್ರೆಸ್ ಬಲ 20ಕ್ಕೆ ವೃದ್ಧಿಯಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸ್ಪಷ್ಟ ಹಾಗೂ ಸ್ಥಿರ ಆಡಳಿತ ನೀಡಲಿದೆ ಎಂದರು.
ನಗರಸಭೆ ಅಭಿವೃದ್ಧಿ ದೃಷ್ಟಿಯಿಂದ ಎಲ್ಲಾ 31 ಜನ ಸದಸ್ಯರು ಪಟ್ಟಣದ ಅಭಿವೃದ್ಧಿಗೆ ಮತ್ತು ಜನರ ಭರವಸೆ ಈಡೇರಿಸಲು ಶ್ರಮಿಸಬೇಕು ಎಂದರು.
ಎಪಿಎಂಸಿ ಅಧ್ಯಕ್ಷ ಶಶಿಧರಗೌಡ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಅಂದುಕುಂಟೆ ರವಿ, ಹಾಲು ಒಕ್ಕೂಟ ಸಂಘದ ನಿರ್ದೆಶಕ ಮೂಡಲಗಿರಿಗೌಡ, ಅಮಾನುಲ್ಲಾ ಖಾನ್, ವಕ್ತಾರ ಎಸ್.ಎನ್.ಕೃಷ್ಣಯ್ಯ, ಶಿರಾ ಅಭಿವೃದ್ಧಿ ಪೋರಂ ಅಧ್ಯಕ್ಷ ಜಗದೀಶ್, ಸಚಿನ್, 20 ಜನ ನಗರಸಭೆ ನೂತನ ಸದಸ್ಯರು ಮತ್ತಿತರರು ಹಾಜರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement