ಛಲವಾದಿ ಮಹಾಸಭಾದ ಬೋರ್ಡ್ ಸ್ಥಾಪನೆ
ತುಮಕೂರು: ತುಮಕೂರು ತಾಲೂಕು ಕೋರಾ ಹೋಬಳಿ ಮೆಳೆಹಳ್ಳಿಯಲ್ಲಿ ಛಲವಾದಿ ಮಹಾಸಭಾದ ನಾಮಫಲಕ ಉದ್ಘಾಟನೆ ನೆರವೇರಿಸಲಾಯಿತು. ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬುದ್ಧನ ಭಾವಚಿತ್ರಗಳನ್ನು ಗ್ರಾಮದ ಬೀದಿ ಬೀದಿಯಲ್ಲಿ ಮೆರವಣಿಗೆ ಮಾಡುವುದರೊಂದಿಗೆ :ೆಲವಾದಿ ಮಹಾಸಭಾದ ತುಮಕೂರು ತಾಲೂಕು ಅಧ್ಯಕ್ಷ ಶ್ರೀನಿವಾಸ್ ಪ್ರೆಸ್ ಅವರ ಮುಖಂಡತ್ವದಲ್ಲಿ ನೆರವೇರಿಸಲಾಯಿತು. ಈ ಸಮಾರಂಭದಲ್ಲಿ ಬಿ.ಜಿ. ನಿಂಗರಾಜು, ಲಕ್ಷ್ಮಯ್ಯ, ಚಂದ್ರಶೇಖರ್, ಹನುಮಂತರಾಯಪ್ಪ, ರಂಗಶಾಮಯ್ಯ, ಸದಾಶಿವಯ್ಯ, ನಿಂಗಮ್ಮ, ಶಾಂತರಾಜು, ಗುರುಪ್ರಸಾದ್, ನರಸಯ್ಯ, ಲಕ್ಷ್ಮೀದೇವಮ್ಮ, ನರಸಿಂಹಮೂರ್ತಿ, ನೀಲಾನಂದ್, ರಂಗಸ್ವಾಮಯ್ಯ, ರಾಜಣ್ಣ, ನಂಜಯ್ಯ, ರಾಜಣ್ಣ ಉಪಸ್ಥಿತರಿದ್ದರು. ಶಿರಾ ತಾಲೂಕು ಅಧ್ಯಕ್ಷ ರಂಗನಾಥ್ ಕ್ರಾಂತಿಗೀತೆ ಹಾಡಿದರು. ಶಿವರಾಜ್ ಸ್ವಾಗತಿಸಿ ಗುರುಪ್ರಸಾದ್ ವಂದಿಸಿದರು.