ರೋಡ್ ಡಿವೈಡರ್ ಮಾಡಲು ತಾರತಮ್ಯ
ತುಮಕೂರು: ಶೆಟ್ಟಿಹಳ್ಳಿ ಮುಖ್ಯ ರಸ್ತೆಯ ಜನತಾ ಕಾಲೋನಿ ರಸ್ತೆಯಲ್ಲಿ ರೋಡ್ ಡಿವೈಡರ್ ಮಾಡುವಾಗ ತಾರತಮ್ಯ ಮಾಡಲಾಗುತ್ತಿದೆ ಎಂದು ಆ ಭಾಗದ ನಿವಾಸಿಗಳು ದೂರಿದ್ದಾರೆ.
ಹಸಿರು ಶಾಲೆಗೆ ಆಯ್ಕೆ
ತುಮಕೂರು: ಹೆಬ್ಬೂರಿನ ಎಸ್ಹೆಚ್ವಿ ಶಾಲೆ ಹಸಿರು ಶಾಲೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ತುಮಕೂರು ವಿಜ್ಞಾನ ಕೇಂದ್ರ ಈ ಶಾಲೆಯನ್ನು ಆಯ್ಕೆ ಮಾಡಿದೆ.
ನಾಗಣ್ಣಗೆ ಸನ್ಮಾನ
ತುಮಕೂರು: ತುಮಕೂರು ನಗರಸಭೆಗೆ ನೂತನವಾಗಿ ಆಯ್ಕೆಯಾಗಿರುವ ನಗರಸಭಾ ಸದಸ್ಯರಾದ ಬಾವಿಕಟ್ಟೆ ನಾಗಣ್ಣ ಹಾಗೂ ಡೆಲ್ಟ ರವಿಕುಮಾರ್ ಅವರಿಗೆ ಇಲ್ಲಿನ ಹಜರತ್ ಮದರ್ ಷಾ ಮಕಾನ್ ವತಿಯಿಂದ ಸನ್ಮಾನಿಸಲಾಯಿತು. ಅಧ್ಯಕ್ಷರಾದ ನಯಾಜ್ ಅಹಮದ್, ಕಾರ್ಯದರ್ಶಿ ಅಯಾಜ್ ಅಹಮದ್, ನಗರಾಧ್ಯಕ್ಷ ರುದ್ರೇಶ್, ಸದಸ್ಯರಾದ ಶಬ್ಬೀರ್ ಅಹಮದ್, ಕೃಷ್ಣಮೂರ್ತಿ, ಅಕೀಯಾಜ್ ಅಹಮದ್, ಎಜಾಜ್ ಅಹಮದ್ ಮುಂತಾದವರು ಇದ್ದರು.
ಸಾಲ ಪಾವತಿಗೆ ಮನವಿ
ತುಮಕೂರು: ಇಂಡಿಯನ್ ಫಿಜಿಕಲ್ ಹ್ಯಾಂಡಿಕ್ಯಾಪ್ಟ್ ಸೌಹಾರ್ದ ಕ್ರಡಿಟ್ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಸಾಲ ಪಡೆದು ಸುಸ್ತಿದಾರರು ಒಂದೇ ಕಂತಿನಲ್ಲಿ ಸಾಲದ ಬಾಕಿ ಪಾವತಿ ಮಾಡಿದರೆ ಬಡ್ಡಿಯಲ್ಲಿ ರಿಯಾಯಿತಿ ನೀಡಲಾಗುವುದು ಎಂದು ಆಡಳಿತ ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ