ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಕ್ರಮ ಮರಳು ಸಾಗಣೆ: 9 ಲಾರಿಗಳ ವಶ

Rashmi Kasaragodu
Updated On : 15 Mar 2013, 12:41 pm

ಕೊರಟಗೆರೆ: ಕೊರಟಗೆರೆ ತಹಸೀಲ್ದಾರ್ ಏಕೇಶ್ ಬಾಬು ನೇತೃತ್ವದ ತಂಡ ಗುರುವಾರ ಬೆಳಗಿನ ಜಾವ 2 ಗಂಟೆ ಸಮಯದಲ್ಲಿ  ತಾಲೂಕಿನ ಜಿ.ನಾಗೇನಹಳ್ಳಿಯಲ್ಲಿ ಮರಳು ಸಾಗಿಸುತ್ತಿದ್ದ 3 ಲಾರಿಗಳನ್ನು, ಮತ್ತು ತುಂಬಗಾನಹಳ್ಳಿಯಲ್ಲಿ ಬೆಳಿಗ್ಗೆ 4 ಗಂಟೆಗೆ 6 ಲಾರಿಗಳನ್ನು, ಮತ್ತು 1 ಇಟಾಚಿಯನ್ನು ವಶಪಡಿಸಿಕೊಂಡಿದ್ದಾರೆ. ಈ ತಂಡದಲ್ಲಿ ಗುರುಪ್ರಸಾದ್, ನರಸಿಂಹಮೂರ್ತಿ ಎ.ಡಿ.ಎಂ, ಮಧು ಚಂದ್ರ, ನೀಲಕಂಠಯ್ಯ ಮತ್ತಿತರು ಇದ್ದರು.
ಚೇತರಿಕೆ ಹಾದಿಯಲ್ಲಿ ಕಾಂಗ್ರೆಸ್ ಪಕ್ಷ...
ಸಕಲೇಶಪುರ: ಪುರಸಭೆ ಚುನಾವಣೆಯಲ್ಲಿ ಗಣನೀಯ ಪ್ರಗತಿ ಸಾಧಿಸಿರುವ ಕಾಂಗ್ರೆಸ್ ಇದೀಗ ಚೇತರಿಕೆಯ ಹಾದಿಯಲಿದೆ ಎಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ತೋಟದಗದ್ದೆ ವಿದ್ಯಾಶಂಕರ್ ಹೇಳಿದರು. ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಪುರಸಭೆ ಚುನಾವಣೆಯ 23 ವಾರ್ಡ್‌ಗಳಲ್ಲಿ 6 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವುಗಳಿಸಿದ್ದು ಇನ್ನೂ 4 ವಾರ್ಡ್‌ಗಳಲ್ಲಿ ಒಂದಂಕಿ ಮತಗಳಿಂದ ನಮ್ಮ ಅಭ್ಯರ್ಥಿ ಸೋತಿದ್ದರೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಎರಡನೇ ಸ್ಥಾನಗಳಿಸಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಶೇಕಡಾವಾರು ಮತಗಳ ಸಂಖ್ಯೆ ಹೆಚ್ಚಿದೆ. ಅಲ್ಲದೆ ಕಳೆದ ತಿಂಗಳು ನಡೆದ ವಣಗೂರು ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಇಬ್ಬರು ಆಯ್ಕೆಯಾಗುವ ಮೂಲಕ ಚೇತರಿಕೆಯ ಮುನ್ಸೂಚನೆ ನೀಡಿದ್ದು ಗ್ರಾಮೀಣ ಮಟ್ಟದಲ್ಲೂ ಪ್ರಗತಿ ಸಾಧಿಸಿದ್ದೇವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement