ಎಸ್‌ಎಸ್‌ಐಬಿಎಂ ವಿದ್ಯಾರ್ಥಿಗಳಿಂದ ರಕ್ತದಾನ
ಕಪ್ರ ವಾರ್ತೆ, ತುಮಕೂರು, ಮಾ.14: ಶ್ರೀ ಸಿದ್ಧಾರ್ಥ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಸಂಗ್ರಹಿಸಿದ 50 ಬಾಟಲಿ ರಕ್ತವನ್ನು ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಗೆ ನೀಡುವ ಮೂಲಕ ರಕ್ತದ ಕೊರತೆ ಎದುರಿಸುತ್ತಿರುವ ರೋಗಿಗಳಿಗೆ ದೊರೆಯುವಂತೆ ಮಾಡುವ ಶ್ಲಾಘನೀಯ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿತು.
ಪ್ರತಿ ವರ್ಷ ರಕ್ತದಾನ ಶಿಬಿರ ಏರ್ಪಡಿಸುವ ಎಸ್‌ಎಸ್‌ಐಬಿಎಂ ಕಾರ್ಯವನ್ನು ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಚನ್ನಬಸವೇಶ್ವರ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಾರ್ಯದರ್ಶಿ ಜ್ಯೋತಿ ಗಣೇಶ್ ಶ್ಲಾಘಿಸಿದರು. ಬಿಬಿಎಂ, ಎಂ.ಕಾಂ ಮತ್ತು ಎಸ್‌ಎಸ್‌ಐಟಿಯ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿ ಉತ್ಸಾಹದಿಂದ ರಕ್ತದಾನ ಮಾಡಿದರು.
ರಕ್ತದಾನ ಮಾಡುವ ಮುನ್ನ ನಡೆದ ಸಮಾರಂಭದಲ್ಲಿ ಶ್ರೀ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಡಾ. ಮಮತಾ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಜಯಕುಮಾರ್‌ಕೆ.ಸಿ. ಭೈರಪ್ಪ ಇತರರು ಪಾಲ್ಗೊಂಡಿದ್ದರು.