ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಚುನಾವಣೆಯಲ್ಲಿ ಗೆಲವು ಸಾಧಿಸಿದ ಅಕ್ಕ, ತಮ್ಮ

Rashmi Kasaragodu
Updated On : 15 Mar 2013, 12:38 pm

ಪಾವಗಡ: ಪುರಸಭೆ ಚುನಾವಣೆಯಲ್ಲಿ  ಅಕ್ಕ ಹಾಗೂ ತಮ್ಮನನ್ನು ಬೆಂಬಲಿಸಿ ಗೆಲ್ಲಿಸಿರುವುದು ಪಟ್ಟಣಾದ್ಯಂತ ಸುದ್ದಿಗೆ ಗ್ರಾಸವಾಗಿದೆ.   ಪುರಸಭೆ ಚುನಾವಣೆಯಲ್ಲಿ ವಾರ್ಡ್‌ನಂ.18.ರಲ್ಲಿ ಸ್ವರ್ಧಿಸಿದ್ದ ಅತಿ ಚಿಕ್ಕ ವಯಸ್ಸಿನ ಜೆಡಿಎಸ್ ಬೆಂಬಲಿತ ಮನುಮಹೇಶ್ 306 ಮತ ಪಡೆಯುವುದರೊಂದಿಗೆ ಜಯಗಳಿಸಿದರು. ಅವರ ಅಕ್ಕ ಸುಮಾ ಅನಿಲ್ 23ನೇ ವಾರ್ಡಿನಿಂದ ಸ್ವರ್ಧಿಸಿ  (ಜೆಡಿಎಸ್ ಬೆಂಬಲಿತ)  ಅತ್ಯಧಿಕ ಮತಗಳನ್ನು ಪಡೆಯುವುದರೊಂದಿಗೆ ಜಯಗಳಿಸಿದ್ದಾರೆ. ಒಂದೇ ಮನೆಯ ಈ ಇಬ್ಬರು ಚುನಾವಣೆಯಲ್ಲಿ ಜಯಗಳಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ, ಪಕ್ಷದ ತಾಲೂಕು ಅಧ್ಯಕ್ಷ ಎನ್. ತಿಮ್ಮಾರೆಡ್ಡಿ, ಮುಖಂಡ ಆರ್.ಸಿ. ಅಂಜಿನಪ್ಪ ಸೇರಿದಂತೆ ಜೆಡಿಎಸ್ ಸಮಿತಿ ಅಭಿನಂದಿಸಿದೆ.
ವಿದ್ಯಾರ್ಥಿ ನಿಲಯ ಕಟ್ಟಡಕ್ಕೆ ದೇಣಿಗೆ
ಹಾಸನ: ಜಿಲ್ಲಾ ಒಕ್ಕಲಿಗರ ಸಂಘದಿಂದ ನಿರ್ಮಿಸುತ್ತಿರುವ ವಿದ್ಯಾರ್ಥಿನಿಲಯ ಕಟ್ಟಡಕ್ಕೆ ಹಾಸನದ ಯಮಸಂದಿಯ ವೈ.ಪಿ. ಗೋಪಾಲಗೌಡ ತಂದೆ ದಿ.ಪುಟ್ಟೇಗೌಡ ವೈ.ಡಿ. ಹಾಗೂ ತಾಯಿ ನಂಜಮ್ಮ ಇವರ ಹೆಸರಿನಲ್ಲಿ 30 ಸಾವಿರ ರು.ಗಳನ್ನು ದೇಣಿಗೆ ನೀಡಿರುವುದಾಗಿ ಅಧ್ಯಕ್ಷ ಜೆ.ಎಲ್. ಮುದ್ದೇಗೌಡ  ತಿಳಿಸಿದ್ದಾರೆ.
ಸ್ಕೌಟ್ಸ್ ಗೈಡ್ಸ್‌ನಿಂದ ವ್ಯಕ್ತಿತ್ವ ವಿಕಸನ
ಹಾಸನ: ಸ್ಕೌಟ್ಸ್- ಗೈಡ್ಸ್‌ನಿಂದ ವ್ಯಕ್ತಿತ್ವ ವಿಕಸನ ಮತ್ತು ಪ್ರೀತಿ, ವಿಶ್ವಾಸ, ನಿಸ್ವಾರ್ಥ ಸೇವೆ ರೂಪಿಸಲು ಸಹಕಾರಿಯಾಗಿದೆ ಎಂದು ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವಿನೋದ್‌ಚಂದ್ರ ತಿಳಿಸಿದರು. ನಗರದ ಸರ್ಕಾರಿ ಕಲಾ ಕಾಲೇಜಿನ ಹಾಸನಾಂಬ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಲೋಕಾಯುಕ್ತ ಡಿವೈಎಸ್‌ಪಿ ಶಿವಬಸಪ್ಪ ಮಾತನಾಡಿ ನಾಯಕ ಇನ್ನೊಬ್ಬರಿಗೆ ದಾರಿ ದೀಪವಾಗಬೇಕು. ಕಣ್ಣಿಲ್ಲದಿದ್ದರು ಕನಸಿರಬೇಕು. ತನ್ನ ತಾನರಿವಿಗೆ ತನ್ನ ಅರಿವೆ ಗುರು ಎಂದು ವಿದ್ಯಾರ್ಥಿಗಳ ಮನ ಮುಟ್ಟುವಂತೆ  ನುಡಿದರು. ನಂತರ ವೀರಭದ್ರಪ್ಪ ಮಾತನಾಡಿ ತನ್ನ ಜೀವನದ ಕಷ್ಟಸುಖಗಳನ್ನು ನೈಜ ಉದಾಹರಣೆಗಳ ಮೂಲಕ ವ್ಯಕ್ತಪಡಿಸಿದರು. ರೋವರ್ಸ್ ಲೀಡರ್ ಪ್ರೊ. ಉದಯಕುಮಾರ್, ರೇಜರ್ಸ್ ಲೀಡರ್ ಪ್ರೊ. ಹೇಮಾವತಿ ಎಂ.ವಿ. ಸ್ಕೌಟ್ಸ್, ಗೈಡ್ಸ್ ಮಾಸ್ಟರ್ ಉಪೇಂದ್ರ, ಗಿರೀಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement