ಇಂದು ಸ್ನೇಹಾದ್ರಿ ಸ್ವಸಹಾಯ ಸಂಘದ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತುಮಕೂರು, ಮಾ.15 ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಮಾ.16 ರಂದು ಬೆಳಗ್ಗೆ 11 ಗಂಟೆಗೆ ಸ್ನೇಹಾದ್ರಿ ಸ್ವಸಹಾಯ ಸಂಘದದ ವತಿಯಿಂದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರಿಗೆ ಮಹಿಳಾ ಕಾನೂನು ದೌರ್ಜನ್ಯ ತಡೆ ಕುರಿತ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಉದ್ಘಾಟನೆಯನ್ನು ಜಿ.ಪಂ. ಸಿಇಓ ಗೋವಿಂದರಾಜು ನೆರವೇರಿಸುವರು. ಅಧ್ಯಕ್ಷತೆಯನ್ನು ಸ್ನೇಹಾದ್ರಿ ಸ್ವಸಹಾಯ ಸಂಘದ ಅಧ್ಯಕ್ಷ ಚಿ.ನಿ. ಪುರುಷೋತ್ತಮ್ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ. ರಜನಿ, ವೆಂಕಟೇಶಯ್ಯ, ಎಸ್.ಬಿ. ಶಿವಕುಮಾರ್, ಐ.ಕೆ. ಫರ್ವಿನ್, ಸಾ.ಚಿ. ರಾಜ್ಕುಮಾರ್, ಎಸ್. ರಮೇಶ್ ಆಗಮಿಸಲಿದ್ದಾರೆ.