ಜಿ.ಎನ್. ಆಂಜಿನಪ್ಪ ರಾಜ್ಯಾಧ್ಯಕ್ಷ
ಮಧುಗಿರಿ: ಕರ್ನಾಟಕ ಜೀತದಾಳು ಮತ್ತು ಕೃಷಿ ಕೂಲಿ ಕಾರ್ಮಿಕರ ಒಕ್ಕೂಟದ ಚುನಾವಣೆ ಇತ್ತ್ತೀಚೆಗೆ ನಡೆದು ರಾಜ್ಯಾಧ್ಯಕ್ಷರಾಗಿ ಮಧುಗಿರಿ ತಾಲೂಕಿನ ಜಿ.ಎನ್. ಆಂಜಿನಪ್ಪ, ಉಪಾಧ್ಯಕ್ಷರಾಗಿ ಎಚ್.ಡಿ.ಕೋಟೆ ಮದೇವ್, ಕಾರ್ಯದರ್ಶಿಯಾಗಿ ಚಿಂತಾಮಣಿ ತಾ.ಲಕ್ಷ್ಮೀಪ್ರಸಾದ್, ಖಜಾಂಚಿ ಗೌರಿಬಿದನೂರು ತಾ.ಪಿ.ಕೆ.ಗಂಗಾಧರಪ್ಪ ಚುನಾಯಿತರಾಗಿದ್ದಾರೆ. ಈ ಸಂದರ್ಭದಲ್ಲಿ ಚುನಾವಣಾ ಮುಖ್ಯಸ್ಥರಾಗಿ ಜೀವಿಕ ಸಂಘಟನೆ ರಾಜ್ಯ ಸಂಚಾಲಕ ಕಿರಣ್ ಕಮಲ್ ಪ್ರಸಾದ್, ವಿ.ಗೋಪಾಲ್ ಚುನಾವಣೆ ನಡೆಸಿಕೊಟ್ಟರು. ಮಧುಗಿರಿ ತಾ.ಜೀವಿಕ ಸಂಘಟನೆ ಸಂಚಾಲಕ ಡಿ.ಟಿ. ಸಂಜೀವಮೂರ್ತಿ,ಮಂಜುನಾಥ್ ಉಪಸ್ಥಿತರಿದ್ದರು.