ನಾಳೆ ಶ್ರೀ ಘನಲಿಂಗ ಶಿವಯೋಗಿಗಳ ಸಂಸ್ಮರಣೆ
ಮೈಸೂರು: ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಸುತ್ತೂರು ಮಠದ ಶ್ರೀ ವೀರಸಿಂಹಾಸನ ಮಹಾಸಂಸ್ಥಾನದ ಹನ್ನೊಂದನೆಯ ಪೀಠಾಧಿಪತಿ ಶ್ರೀ ಘನಲಿಂಗ ಶಿವಯೋಗಿಗಳವರ ಸಂಸ್ಮರಣೆ ಮಾ.17 ರಂದು ತುಮಕೂರು ಜಿಲ್ಲೆಯ ಕಗ್ಗೆರೆಯಲ್ಲಿನ ಶ್ರೀ ಸಿದ್ಧಲಿಂಗೇಶ್ವರ ತಪೋಕ್ಷೇತ್ರದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ ಶಿವಯೋಗಿಗಳ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ವಿಶೇಷ ಪೂಜೆ ನಡೆಯಲಿದೆ. ಅಲ್ಲದೆ ಸಂಜೆ 4ಕ್ಕೆ ಉತ್ಸವವು ಏರ್ಪಡಿಸಿದೆ ಎಂದು ಸುತ್ತೂರು ಕ್ಷೇತ್ರದ ವ್ಯವಸ್ಥಾಪಕ ಶಿವಕುಮಾರಸ್ವಾಮಿ ತಿಳಿಸಿದ್ದಾರೆ.