ಮರಳು ತುಂಬುತ್ತಿದ್ದ ವಾಹನಗಳ ಮೇಲೆ ದಾಳಿ: 16 ಲಾರಿ ವಶ
ಶಿರಾ: ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಬ್ರಹ್ಮಸಂದ್ರ ಸಮೀಪದ ಕಪ್ಪೇನಹಳ್ಳಿ ಹೊಸ ಕೆರೆಯಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದ ವಾಹನಗಳ ಮೇಲೆ ದಾಳಿ ಮಾಡಿ 16 ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯಲ್ಲಿ ತಹಸೀಲ್ದಾರ್ ಕಾಂತರಾಜು, ಹಾಗೂ ಕಳ್ಳಂಬೆಳ್ಳ ಠಾಣಾಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದು ತಹಸೀಲ್ದಾರ್ ಕಾಂತರಾಜು ಅವರು ಮಾತನಾಡಿ ಎಲ್ಲಾ ವಾಹನಗಳ ಮೇಲೆ ಕೇಸು ದಾಖಲಿಸಲಾಗಿದೆ. ಅವರ ಮೇಲೆ ಉಗ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು