ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮರಳು ತುಂಬುವ ಹಿಟಾಚಿ, ಲಾರಿ ಮುಟ್ಟುಗೋಲು: ರೂಪಾ

Rashmi Kasaragodu
Updated On : 16 Mar 2013, 11:55 am

ಕ.ಪ್ರ. ವಾರ್ತೆ  ಶಿರಾ  ಮಾ. 16
ತಾಲೂಕಿನ ಮದಲೂರು ಕೆರೆಯಲ್ಲಿ ಮರಳು ತುಂಬಲು ಬಳಸುತ್ತಿರುವ ಹಿಟಾಚಿ, ಲಾರಿಗಳನ್ನು ಮುಟ್ಟುಗೋಲು ಹಾಕಿಕೊಂಡು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಜಿಲ್ಲಾ ಭೂ ವಿಜ್ಞಾನ ಉಪ ನಿರ್ದೆಶಕಿ ರೂಪಾ ತಿಳಿಸಿದರು.
ಅವರು ತಾಲೂಕಿನ ಮದಲೂರು ಕೆರೆಯಲ್ಲಿ ಹೇಮಾವತಿ ನಾಲಾ ಹೆಸರಿನಲ್ಲಿ ಅಕ್ರಮ ಮರಳು ಸಾಗಿಸಲಾಗುತ್ತಿದೆ ಎಂದು ಮಾಜಿ ಸಚಿವ ಬಿ.ಸತ್ಯನಾರಾಯಣ ಮತ್ತು ಅವರ ಬೆಂಬಲಿಗರು ಧರಣಿ ಕುಳಿತಿರುವ ಸ್ಥಳಕ್ಕೆ ಭೇಟಿ ನೀಡಿ  ಧರಣಿ ನಿರತರ ಮಾತುಗಳನ್ನು ಆಲಿಸಿದರು.
ಬಿ.ಸತ್ಯನಾರಾಯಣ ಮಾತನಾಡಿ ನಾವು ಧರಣಿ ಕೂತಿರುವುದು ಮದಲೂರು ಕೆರೆಗೆ ಹೇಮಾವತಿ ನೀರನ್ನು ಹರಿಯುವುದನ್ನು ತಡೆಯುವುದಕ್ಕಲ್ಲ. ಆದರೆ ಇಲ್ಲಿ ಹೇಮಾವತಿ ನಾಲೆ ಹೆಸರಿನಲ್ಲಿ ನಿತ್ಯ ಸರ್ಕಾರದ ಹೆಸರನ್ನು ಮರಳು ತುಂಬುವ ಲಾರಿಯ ಮೇಲೆ ಹಾಕಿಕೊಂಡು ನೂರಾರು ಲಾರಿ ಮರಳನ್ನು ದೋಚಲಾಗುತ್ತಿದೆ. ಇದನ್ನು ತಡೆಯಿರಿ ಎಂಬುದು ನಮ್ಮ ಕೋರಿಕೆಯಾಗಿದೆ ಎಂದರು.
ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಕಾಂತರಾಜು ಹಾಗೂ ಜಿಲ್ಲಾ ಭೂ ವಿಜ್ಞಾನ ಉಪ ನಿರ್ದೆಶಕಿ ರೂಪಾ  ಮಾತನಾಡಿ ಮೇಲ್ನೋಟಕ್ಕೆ ತಪ್ಪಾಗಿ ಕಾಣುತ್ತಿದ್ದು ಇದರ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ನಂತರ ಇದೇ ಸ್ಥಳದಲ್ಲಿ ಜಿ.ಪಂ. ಸದಸ್ಯ ಅರೆಹಳ್ಳಿ ರಮೇಶ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಮದ್ದವಳ್ಳಿ ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂಗಾವರ ಮಾರಣ್ಣ, ಜನಾರ್ದನ್,  ಮತ್ತಿತರರು ಧರಣಿ ನಡೆಸುತ್ತ ಹೇಮಾವತಿ ನಾಲೆ ನಿರ್ಮಿಸಲು ಇಲ್ಲಿಂದಲೇ ಮರಳು ಕೊಡಿ ಕಾಮಗಾರಿ ಪೂರ್ಣಗೊಳ್ಳಲಿ. ಇಲ್ಲಿನ ಮರಳನ್ನು ಬೇರೆ ಎಲ್ಲಿಗೂ ಸಾಗಿಸುತ್ತಿಲ್ಲ. ಇಲ್ಲಿನ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಡಿ ಎಂದು ಆಗ್ರಹಿಸಿದರು.
ಇಬ್ಬರ ಸಮಸ್ಯೆಗಳನ್ನು ಆಲಿಸಿ ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ತಹಸೀಲ್ದಾರ್ ಕಾಂತರಾಜು ಜಿಲ್ಲಾ ಭೂವಿಜ್ಞಾನ ಉಪನಿರ್ದೇಶಕಿ ರೂಪಾ ಅವರು ಸ್ಥಳದಿಂದ ತೆರಳಿದರು. ಸ್ಥಳದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರುಗಳು ಹಾಜರಿದ್ದು ಪೊಲೀಸ್  ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement