22 ಕ್ಕೆ ಯುವ ಸಮಾವೇಶ
ತುಮಕೂರು: ಇಲ್ಲಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಮಾ.22 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಯುವ ಸಮಾವೇಶ, ವಸ್ತುಪ್ರದರ್ಶನ ಹಾಗೂ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ನೋಂದಾಯಿತವಾಗಿ ನೆಹರು ಯುವ ಕೇಂದ್ರಕ್ಕೆ ಸಂಯೋಜನೆ ಹೊಂದಿರುವ ಎಲ್ಲಾ ಯುವಕ ಸಂಘ, ಮಂಡಳಿಗಳು ತಮ್ಮ ಸಾಂಸ್ಕೃತಿಕ ತಂಡಗಳೊಡನೆ ಬಂದು ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.