ಕಣ್ಣಿನ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ
ಕೊರಟಗೆರೆ: ತುಮಕೂರಿನ ಧಾನ್ ಫೌಂಡೇಷನ್ ಮತ್ತು ಕಟ್ಟೇಗಣಪತಿ ಮಹಿಳಾ ಕಳಂಜಿಯಂ ಒಕ್ಕೂಟ ಕೊರಟಗೆರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಆಶ್ರಯದಲ್ಲಿ ಹೊಳವನಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹೊಳವನಹಳ್ಳಿಯಲ್ಲಿ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಧಾನ್ ಫೌಂಡೇಷನ್ ಸಂಸ್ಥೆಯ ಪ್ರಾದೇಶಿಕ ಸಂಯೋಜಕ ಎಚ್.ಸಿ. ಗೌಡರವರು ಕಣ್ಣಿನ ಹಿತದೃಷ್ಟಿ ಮತ್ತು ಕಣ್ಣಿನ ಆರೋಗ್ಯದ ಬಗ್ಗೆ ಮಾತನಾಡಿದರು. ಕಟ್ಟೆಗಣಪತಿ ಮಹಿಳಾ ಕಳಂಜಿಯಂ ಒಕ್ಕೂಟದ ಅಧ್ಯಕ್ಷೆ ಕಮಲಮ್ಮ ಹಾಜರಿದ್ದರು. ಒಕ್ಕೂಟದ ನಿರ್ವಾಹಕ ಹೆಚ್.ವಿ. ಉಮೇಶ್ ಶಸ್ತ್ರ ಚಿಕಿತ್ಸೆ, ಶಿಬಿರದ ಉದ್ದೇಶದ ಬಗ್ಗೆ ಮಾಹಿತಿ ಕೊಟ್ಟರು. ಶಿಬಿರದಲ್ಲಿ ಸುಮಾರು 135 ಜನರು ಆಪರೇಷನ್ ಕ್ಯಾಂಪ್ಗೆ ಬಂದಿದ್ದು, 65 ಜನ ಮಾತ್ರ ಕಣ್ಣಿನ ಚಿಕಿತ್ಸೆಗೆ ಆಯ್ಕೆಯಾದರು. ಬಿ.ಎಂ. ಮಂಜುನಾಥ್ ಸ್ವಾಗತಿಸಿದರು.